ಬೆಳಗಾವಿ,: ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸರು ತಡರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಶೋಭಿತ್ ಗೌಡಾ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಿ ಬೆಳಗಾವಿಗೆ ಕರೆ ತಂದು ವೈದ್ಯಕೀಯ ಪರೀಕ್ಷೆ ನಡೆಸಿ ಸ್ಥಳ ಮಹಜರು ನಡೆಸಲು ಸಿದ್ಧತೆ ನಡೆಸಿದ್ದಾರೆ.
ಉಮಾಳ ಫೇಸ್ ಬುಕ್ ಸ್ನೇಹಿತನಾಗಿದ್ದ ಶೋಭಿತ್ ಗೌಡಾಗೆ ಅ.9 ರಂದು ಉಮಾ ದೂರವಾಣಿ ಕರೆ ಮಾಡಿ ಎಲ್ಲ ಕೆಲಸ ಮುಗಿಸಿದ್ದೇನೆ. ನನಗೆ ದೈರ್ಯ ಸಾಲುತ್ತಿಲ್ಲ ಬನ್ನಿ ಎಂದು ಕರೆದು ಪತಿ ಸಂತೋಷಗೆ ನಿದ್ರೆ ಮಾತ್ರೆ ಹಾಕಿ ಉಸಿರು ಗಟ್ಟಿ ಕೊಲೆ ಮಾಡಲು ಯತ್ನಿಸಿದರೂ ಸಂತೋಷ ಮೃತಪಟ್ಟಿರಲ್ಲವಂತೆ. ಕೊನೆಗೆ ಸ್ನೇಹಿತರ ಸಹಾಯರಿಂದ ಉಮಾ ಸಂತೋಷನನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೆಲವೇ ಕ್ಷಣದಲ್ಲಿ ಆಂಜನೇಯ ನಗರದಲ್ಲಿರುವ ಮೃತ ಸಂತೋಷ ಮನೆಯಲ್ಲಿ ಕೊಲೆಯ ಪ್ರಮುಖ ಆರೋಪಿ ಉಮಾಳನ್ನು ಬಂಧಿಸಲು ಪೊಲೀಸರು ತೆರಳಲಿದ್ದಾರೆ‌.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಮೃತ ಸಂತೋಷ ಮಗಳು ನೀಡಿದ ದೂರಿನ ಆಧಾರದ ಮೇಲೆ ಮಾಳಮಾರುತಿ ಸಿಪಿಐ ಕಾಲಿಮಿರ್ಚಿ ನೇತೃತ್ವದಲ್ಲಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.