ಬೆಳಗಾವಿ : ಬೆಳಗಾವಿ- ಬೆಂಗಳೂರು-ಬೆಳಗಾವಿ ಮಧ್ಯೆ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆ ವಿಮಾನಯಾನ ಸೇವೆಯನ್ನು ರದ್ದು ಮಾಡದಂತೆ ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ವಿಮಾನಯಾನ ಸಚಿವ ಕೆ. ಆರ್ ನಾಯ್ಡು ಅವರನ್ನು ಒತ್ತಾಯಿಸಿ ಮನವಿ ಅರ್ಪಿಸಿದ್ದಾರೆ.
ಬೆಳಗಾವಿ – ಬೆಂಗಳೂರು – ಬೆಳಗಾವಿ ನಡುವೆ ಇಂಡಿಗೋ ಸಂಸ್ಥೆ ಪ್ರತಿನಿತ್ಯ ಬೆಳಿಗ್ಗೆ ವಿಮಾನಯಾನ ಸೇವೆಯನ್ನು ಬಹಳ ದಿನಗಳಿಂದ ಒದಗಿಸುತ್ತಾ ಬಂದಿದೆ, ಕಳೆದ ಒಂದು ವರ್ಷದಲ್ಲಿ ಶೇ.82ರಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದರೆ, ಇಂಡಿಗೋ ಏರ್ ಲೈನ್ಸ್ ದಿ. 27-10-2024 ರಿಂದ ಈ ಸೇವೆಯನ್ನು ರದ್ದುಗೊಳಿಸಲಿದೆ. ಇದು ಅತ್ಯಂತ ಖೇದಕರ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ರದ್ದು ಮಾಡದಂತೆ ವಿನಂತಿಸಿದರು.
ಇದೇ ರೀತಿ ಬೆಳಗಾವಿ ವಿಮಾನ ನಿಲ್ದಾಣದಿಂದ ಇತರ ನಗರಗಳಾದ ಪುಣೆ, ಚೆನ್ನೈ ಕೊಚ್ಚಿನ್, ಲಖನೌ, ಮೈಸೂರು, ಸೂರತ್, ಮುಂಬಯಿ (ಏರ್ ಬಸ್) ಬೆಂಗಳೂರು (ಏರ್ ಬಸ್)
ಗಳಿಗೂ ಸಹ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಇತರೆ ವಿಮಾನ ಸಂಸ್ಥೆಗಳೊಂದಿಗೆ ಸಮಾಲೋಚಿಸುವಂತೆ ವಿಷಯ ಪ್ರಸ್ತಾಪಿಸಿದಾಗ ಆ ವಿಷಯವನ್ನು ಸಹ ಅವಶ್ಯವಾಗಿ ಪರಿಗಣಿಸುವುದಾಗಿ ಹೇಳಿದರು.
ಉಡಾನ್ -3/0 ಯೋಜನೆಯನ್ನು 10 ವರ್ಷಗಳ ಕಾಲಾವಧಿಗೆ ವಿಸ್ತರಿಸಿ, ಇದಕ್ಕೆ ಬೆಳಗಾವಿ ವಿಮಾನ ನಿಲ್ದಾಣವನ್ನು ಸೇರ್ಪಡೆ ಮಾಡಿ ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದ್ದಾರೆ.
ಬರುವ ಡಿಸೆಂಬರ್ ನಲ್ಲಿ ಹೊಸ ವಿಮಾನಗಳು ಸಂಸ್ಥೆಗೆ ಪೂರೈಕೆ ಯಾಗಲಿರುವ ಹಿನ್ನೆಲೆಯಲ್ಲಿ ಆವಾಗ ಮಾರ್ಗದಲ್ಲಿ ಈ ಸೇವೆಯನ್ನು ಪುನಃ ಆರಂಭಿಸುವ ಭರವಸೆಯನ್ನು ಇಂಡಿಗೋ ಅಧಿಕಾರಿಗಳು ಬೀಡಿದ್ದಾರೆ ಎಂದು ತಿಳಿಸಿದರು. ಬೆಳಗಾವಿ ವಿಮಾನ ನಿಲ್ದಾಣದಿಂದ, ಇನ್ನಿತರ ನಗರಗಳಿಗೂ ಸೇವೆಯನ್ನು ಒದಗಿಸುವಂತೆ ಕೋರಿದ್ದಾರೆ.