ಬೆಳಗಾವಿ :ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಪಂಢರಪುರದಲ್ಲಿ ಇದೀಗ ಆಷಾಢ ಏಕಾದಶಿಯ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ಕರ್ನಾಟಕದ ಭಕ್ತರು ಅಪಾರ ಸಂಖ್ಯೆಯ ಭಕ್ತರು ಪಂಢರಪುರಕ್ಕೆ ಧಾವಿಸುತ್ತಾರೆ.
ಕರ್ನಾಟಕದ ಭಕ್ತರ ಅನುಕೂಲಕ್ಕೆ ಇದೀಗ ರೈಲ್ವೆ ಇಲಾಖೆ ಅನುಕೂಲತೆ ಮಾಡಿಕೊಟ್ಟಿದೆ. ಬೆಂಗಳೂರು-ಪಂಢರಪುರ-ಬೆಂಗಳೂರು ರೈಲು ಈಗ ಕಾರಣಾಂತರಗಳಿಂದ ಸಂಚಾರ ಸ್ಥಗಿತಗೊಂಡಿದೆ. ಆದರೆ, ಬೆಳಗಾವಿ ಜನತೆಯ ಬೇಡಿಕೆಯಿಂದಾಗಿ ಸೋಮವಾರದಿಂದ (ಜು.15) ಬುಧವಾರದವರೆಗೆ (ಜು.17) ಮೂರು ದಿನಗಳ ಕಾಲ ಈ ರೈಲು ಸಂಚಾರ ಆರಂಭಿಸಲಾಗಿದೆ. ಈ ರೈಲು ಸಂಚರಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಪಂಢರಪುರಕ್ಕೆ ಹೋಗಲು ಅನುಕೂಲವಾಗಲಿದೆ.
ರೈಲು ನಂ. ರೈಲು 06295 – ಸೋಮವಾರ ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಸಂಜೆ 6.20 ಕ್ಕೆ ಪಂಢರಪುರ ತಲುಪಲಿದೆ. ಅಲ್ಲಿಂದ ರೈಲು ನಂ. ರೈಲು 06296 ರಾತ್ರಿ 8 ಗಂಟೆಗೆ ಪಂಢರಪುರದಿಂದ ಹೊರಡಲಿದೆ. ಮತ್ತು ಮರುದಿನ 12.30ಕ್ಕೆ ಬೆಂಗಳೂರು ತಲುಪಲಿದೆ.
ಬೆಂಗಳೂರು, ತುಮಕೂರು, ಗುಬ್ಬಿ, ತಿಪಟೂರು, ಅರಸೀಕೆರೆ, ದಾವಣಗೆರೆ, ಹರಿಹರ, ರಾಣೇಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ, ಘಟಪ್ರಭಾ, ರಾಯಬಾಗ, ಚಿಂಚಲಿ, ಕುಡಚಿ, ಉಗಾರಖುರ್ದ, ಮಿರಜ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಮಾರ್ಗವು ಸಂಗೋಳದಿಂದ ಪಂಢರಪುರಕ್ಕೆ ಸಂಪರ್ಕಿಸಲಿದೆ. ರೈಲು ಒಟ್ಟು 20 ಕೋಚ್ಗಳನ್ನು ಹೊಂದಿದೆ.
ಕಾಯ್ದಿರಿಸಿದ ಎಸಿ, ಸ್ಲೀಪರ್, ದ್ವಿತೀಯ ದರ್ಜೆ, ಸಾಮಾನ್ಯ, ಅಂಗವಿಕಲ ಬೋಗಿಗಳಿವೆ.
ಬೆಂಗಳೂರು-ಪಂಢರಪುರ-ಬೆಂಗಳೂರು ರೈಲು ಸೇವೆ ಜೂನ್ 25 ರಿಂದ ಜುಲೈ 5 ರವರೆಗೆ ಚಾಲನೆಯಲ್ಲಿದೆ.
ಮೂರು ದಿನ ಬೆಂಗಳೂರು-ಪಂಢರಪುರ ರೈಲು ಸಂಚಾರ
