ಬೆಳಗಾವಿ: ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ 1,73,730 ಮತಗಳ ಅಂತರ ಕಾಯ್ದುಕೊಂಡು ಮುನ್ನಡೆದಿದ್ದಾರೆ. 16ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಇನ್ನು ಕೊನೆಯ ಸುತ್ತಿನ 10 ಸಾವಿರ ಮತಗಳ ಎಣಿಕೆ ಮಾತ್ರ ಬಾಕಿ ಇದೆ. ಶೆಟ್ಟರ್ ಗೆಲುವು ಬಹುತೇಕ ಖಾತ್ರಿಯಾಗಿದ್ದು, ಬೆಳಗಾವಿ ನೂತನ ಸಂಸದರೆಂದು ಘೋಷಣೆ ಮಾತ್ರ ಬಾಕಿ ಇದೆ.
ಒಟ್ಟು 1365860 ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಶೆಟ್ಟರ್ 7,50,949 ಹಾಗೂ ಕಾಂಗ್ರೆಸ್ನ ಮೃಣಾಲ್ ಹೆಬ್ಬಾಳಕರ 5,77,219 ಮತಗಳನ್ನು ಪಡೆದುಕೊಂಡಿದ್ದಾರೆ.
ಬೆಳಗಾವಿ ನೂತನ ಸಂಸದರಾಗಿ ಶೆಟ್ಟರ ಆಯ್ಕೆ
