ಬೆಳಗಾವಿ : ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಬಿಜೆಪಿ ಶಾಸಕಿ. ಅವರ ಕ್ಷೇತ್ರದಲ್ಲೇ ಪತಿ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಹಿನ್ನಡೆಯಾಗಿದ್ದು, ನಿಪ್ಪಾಣಿಯಲ್ಲಿ ಕಾಂಗ್ರೆಸ ಅಭ್ಯರ್ಥಿ ಪ್ರಿಯಾಂಕಾ ಅವರು 29,752 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಹುಕ್ಕೇರಿ ಮತಕ್ಷೇತ್ರದಲ್ಲಿ ಮಾತ್ರ ಬಿಜೆಪಿ 7583 ಮತ ಪಡೆದು ಮುನ್ನಡೆ ಸಾಧಿಸಿದ್ದರೆ ಉಳಿದ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪೂರಕವಾಗಿ ಮತ ಪಡೆದುಕೊಂಡಿದ್ದಾರೆ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಚಿಕ್ಕೋಡಿ ಮತಕ್ಷೇತ್ರ ಮಹೇಶ ತಮ್ಮಣ್ಣವರ ಅವರು ಪ್ರತಿನಿಧಿಸುವ ಕುಡಚಿ ಮತಕ್ಷೇತ್ರ, ರಾಜು ಕಾಗೆ ಪ್ರತಿನಿಧಿಸುವ ಕಾಗವಾಡ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೀಡ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ತಂದೆ ಪ್ರತಿನಿಧಿಸುವ ಯಮಕನಮರಡಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ 23,587 ಮತಗಳ ಮುನ್ನಡೆ ಸಾಧಿಸಿದೆ.
ಹುಕ್ಕೇರಿ
ಬಿಜೆಪಿ : 85226
ಕಾಂಗ್ರೆಸ್ : 77643
ಬಿಜೆಪಿಗೆ 7583 ಮುನ್ನಡೆ
ನಿಪ್ಪಾಣಿ
ಬಿಜೆಪಿ : 76298
ಕಾಂಗ್ರೆಸ್ : 106050
ಕಾಂಗ್ರೆಸ್ : 29752 ಮುನ್ನಡೆ
ಚಿಕ್ಕೋಡಿ
ಬಿಜೆಪಿ : 80569
ಕಾಂಗ್ರೆಸ್ : 97159
ಕಾಂಗ್ರೆಸ್ : 16590
ರಾಯಬಾಗ
ಬಿಜೆಪಿ : 73002
ಕಾಂಗ್ರೆಸ್ : 79821
ಕಾಂಗ್ರೆಸ್ : 6819 ಮುನ್ನಡೆ
ಯಮಕನಮರಡಿ
ಬಿಜೆಪಿ : 71955
ಕಾಂಗ್ರೆಸ್ : 95542
ಕಾಂಗ್ರೆಸ್ 23587 ಮುನ್ನಡೆ
ಕುಡಚಿ
ಬಿಜೆಪಿ : 61174
ಕಾಂಗ್ರೆಸ್ : 83942
ಕಾಂಗ್ರೆಸ್ : 22768 ಮುನ್ನಡೆ
ಕಾಗವಾಡ
ಬಿಜೆಪಿ : 72877
ಕಾಂಗ್ರೆಸ್ : 84075
ಕಾಂಗ್ರೆಸ್ 11198 ಮುನ್ನಡೆ
