ಬೆಳಗಾವಿ: ಪ್ರತಿಯೊಬ್ಬ ಸಾಧಕರ ಹಿಂದೆಯೂ ಒಬ್ಬ ಮಹಿಳೆ ಇರುತ್ತಾಳೆ ಎಂಬುವುದು ಸರ್ವೆ ಸಾಮಾನ್ಯ ಸಂಗತಿ. ಆದರೆ ಇಲ್ಲಿ ಪುತ್ರಿ ಸಾಧನೆ ಹಿಂದೆ ತಂದೆ ಇರುವುದು ಅಪರೂಪ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಭಾರತದಲ್ಲಿ ಅತಿ ಕಿರಿಯ ಸಂಸದೆ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರು ಸಧ್ಯ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು, ದೇಶದಲ್ಲೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಎಂಪಿಯಾಗಿ ದಾಖಲೆ ಬರೆದು ಪ್ರಿಯಂಕಾ ಜಾರಕಿಹೊಳಿ ಅವರು ಇನ್ನೊಬ್ಬರಿಗೆ ಸ್ಪೂರ್ತಿದಾಯಕರಾಗಿದ್ದಾರೆ.
ಕೇವಲ 27 ವರ್ಷಕ್ಕೇ ಎಂಪಿಯಾದ ಪ್ರಿಯಂಕಾ: ಭಾರತದಲ್ಲಿ ಕಿರಿಯ ವಯಸ್ಸಿನ ಎಂಪಿಯಾಗಿ ಪ್ರಿಯಂಕಾ ಜಾರಕಿಹೊಳಿ ದಾಖಲೆ ಮಾಡುವ ಮೂಲಕ ಎಲ್ಲರನ್ನು ಹುಬ್ಬೆರಿಸುವಂತೆ ಮಾಡಿದ್ದಾರೆ. ಚುನಾವಣೆಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ, ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಸೋಲಿಸಿ ಅತಿ ಕಿರಿಯ ಸಂಸದೆ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಮತ್ತು ಶಕುಂತಲಾ ದಂಪತಿಯ ಪುತ್ರಿ.
ಪ್ರಿಯಂಕಾ ಜಾರಕಿಹೊಳಿ ವಿವಿರ: ನೂತನ ಎಂಪಿಯಾಗಿ ಆಯ್ಕೆಯಾಗಿರುವ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಈಗ 27 ವರ್ಷ. ಅವರು ಹುಟ್ಟಿದ್ದು 1997ರ ಏಪ್ರಿಲ್ 16ರಂದು. ಪ್ರಿಯಂಕಾ ಓದಿದ್ದು ಎಂಬಿಎ. ಪದವಿದರೆ. ಎಂಬಿಎ ವಿದ್ಯಾಭ್ಯಾಸದ ಮೂಲಕ ಅವರು ವ್ಯವಹಾರ ಚತುರತೆಯನ್ನೂ ಬೆಳೆಸಿಕೊಂಡಿದ್ದಾರೆ. ಸತೀಶ ಶುಗರ್ ಲಿಮಿಟೆಡ್, ಬೆಳಗಮ್ ಶುಗರ್ ಪ್ರೈವೇಟ್ ಲಿಮಿಟೆಡ್, ಗಾಡಿಗಾಂವ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಗ್ರಾಟ್ಸ್ ಇನ್ಫ್ರಾ ಲಿಮಿಟೆಡ್, ನೇಚರ್ ನೆಸ್ಟ್ ಹಾರ್ಟಿಕಲ್ಚರ್, ಆಂಡ್ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 14 ಸಂಘ ಸಂಸ್ಥೆಗಳ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನೂತನ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.
ಜನ ಕಲ್ಯಾಣಕ್ಕಾಗಿ ಎನ್‌ಜಿಒಗಳನ್ನು ನಡೆಸುತ್ತಿದ್ದಾರೆ. ಅದರ ಜತೆಗೆ ಪರಿಸರಕ್ಕಾಗಿಯೂ ಎನ್‌ಜಿಒಗಳಿವೆ. ಹೆಚ್ಚು ಒಡವೆ ಧರಿಸದೆ ಸಾಮಾನ್ಯ ದಿರಿಸಿನಲ್ಲೇ ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಾರೆ. ಸಂಕಷ್ಟಕ್ಕೆ ಸ್ಪಂದಿಸುವಂತ ಸಹೃದಯಿ, ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸಿಕೊಟ್ಟು ಸರ್ವರಿಗೂ ಚಿರಪರಿಚಿತವಾದ ಯುವತಿ ಕಣ್ಮಣಿಯೇ ಪ್ರಿಯಂಕಾ ಜಾರಕಿಹೊಳಿ. ಲೋಕೋಪಯೋಗಿ ಸಚಿವ, ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರ ಸುಪುತ್ರಿಯಾದ ಪ್ರಿಯಂಕಾ ಅವರು ರಾಜಕೀಯ ಪ್ರತಿಷ್ಠಿತ ಕುಟುಂಬದಿಂದ ಬಂದರೂ ಸಾಮಾಜಿಕ ಸೇವೆಯಿಂದಲೇ ಜಿಲ್ಲೆಯಲ್ಲಿ ಜನರ ಮನದಲ್ಲಿ ಯುವರಾಣಿಯಾಗಿ ಮಿಂಚುತ್ತಿದ್ದಾರೆ. ಒಟ್ಟಾರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತ ಪಡೆಯುವ ಮೂಲಕ ಜೊಲ್ಲೆ ಅವರನ್ನು ಕಣದಿಂದ ಹೊರಗಟ್ಟಿ ಸಾಧನೆ ಮಾಡುವ ಮೂಲಕ ದೇಶದಲ್ಲೇ ಅತಿ ಚಿಕ್ಕ ವಯಸ್ಸಿನ ಸಂಸದೆ ಎಂಬ ದಾಖಲೆಯನ್ನ ತಮ್ಮದಾಗಿಸಿಕೊಂಡು ಉತ್ತರ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ.
ಕಿರಿಯ ವಯಸ್ಸಿನ ಎಂ ಪಿಯಾಗಿ ದಾಖಲೆ ಮಾಡಿದ ಪ್ರಿಯಾಂಕ
