ಬೆಳಗಾವಿ : ಪ್ರೀತ್ಸೆ ಪ್ರೀತ್ಸೆ ಎಂದು ಯುವತಿಯ ಹಿಂದೆ ಬಿದ್ದಿದ್ದ ಯುವಕ ಹಾಗೂ ಆತನ ಸಹೋದರನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ.
ಕಾರಿಮನಿ ಗ್ರಾಮದ ಯಲ್ಲಪ್ಪ ಹಳೇಗೋಡಿ (22) ಮತ್ತು ಆತನ ಸಹೋದರ ಮಾಯಪ್ಪ ಹಳೇಗೋಡಿ ಹತ್ಯೆಗೀಡಾದ ಯುವಕರಾಗಿದ್ದಾರೆ.

ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾವಿಹಾಳ( 50 )ಎಂಬಾತ ಈ ಕೃತ್ಯ ನಡೆಸಿದ್ದಾನೆ. ಫಕೀರಪ್ಪನ ಮಗಳನ್ನು ಪ್ರೀತಿಸುವಂತೆ ಯಲ್ಲಪ್ಪ ಹಠ ಹಿಡಿದಿದ್ದ. ವಿಷಯ ತಿಳಿದ ನಂತರ ತಂದೆ ನನ್ನ ಮಗಳ ವಿಷಯಕ್ಕೆ ಬರಬೇಡ ಎಂದು ಬುದ್ದಿ ಮಾತು ಹೇಳಿದ್ದಾನೆ. ಆಗ ಫಕೀರಪ್ಪ ಮತ್ತು ಯಲ್ಲಪ್ಪ ಅವರ ಮಧ್ಯೆ ವಾಗ್ವಾದ ನಡೆದು ವಿಕೋಪಕ್ಕೆ ಹೋಗಿದೆ. ಇವರಿಬ್ಬರ ಜಗಳ ತಪ್ಪಿಸಲು ಬಂದ ಸಹೋದರ ಮಾಯಪ್ಪ ಸಹ ಚಾಕುವಿನ ಇರಿತಕ್ಕೆ ಒಳಗಾಗಿದ್ದಾನೆ. ಈತ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ವ್ರತಪಟ್ಟಿದ್ದಾನೆ. ಘಟನೆ ನಂತರ ಪರಾರಿಯಾಗಿರುವ ಫಕೀರಪ್ಪನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿವಪ್ರಕರಣ ದಾಖಲಾಗಿದೆ.