ದೋಹಾ: ಕತಾರನಲ್ಲಿರುವ ವಕ್ರದ ದೆಹಲಿ ಸಾರ್ವಜನಿಕ ಶಾಲೆಯ ಭವ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ 2024ನೇ ಸಾಲಿನ ವಸಂತೋತ್ಸವ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಗೌರವದಿಂದ ಸನ್ಮಾನಿಸಲಾಯಿತು.
ಸೋಲರಿಯದ ಸಮಾಜಸೇವಕ ಎಂದೇ ಪ್ರಖ್ಯಾತಿ ಹೊಂದಿರುವ ಕರ್ನಾಟಕದ ಬೈಂದೂರು ಮೂಲದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಕನ್ನಡ ಹಾಗೂ ಕನ್ನಡೇತರ ಭಾರತೀಯರಿಗೆ ತಾವು ಮಾಡುತ್ತಿರುವ ಸಮಾಜ ಸೇವೆಯನ್ನು ಶ್ಲಾಘಿಸಿ ಹಾಗೂ ಕರ್ನಾಟಕ ಸಂಘ ಕತಾರ್ ವತಿಯಿಂದ ಆಯೋಜಿಸುತ್ತಿರುವ ಪ್ರತಿ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಅವರನ್ನು ಕರ್ನಾಟಕ ಸಂಘ ಕತಾರ್ ನ ಆಡಳಿತ ಮಂಡಳಿಯ ಪರವಾಗಿ ಅನಂತಾನಂತ ಧನ್ಯವಾದಗಳು. ಅವರ ಈ ಅವಿರತ ಸೇವೆ ಹೀಗೆ ಮುಂದುವರೆಯಲಿ ಎಂದು ನಮ್ಮ ಸಂಘವು ಆಶಿಸುತ್ತದೆ. ಶ್ರೀಯುತರನ್ನು ವಸಂತೋತ್ಸವ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಸತ್ಕಾರ
