ಬೆಂಗಳೂರು ; ಬೆಳಗಾವಿ ನಗರದಲ್ಲಿ ಉಂಟಾಗುತ್ತಿರುವ ವಾಹನ ಸಂಚಾರ ದಟ್ಟಣೆ ನಿವಾರಿಸಲು ಸುಮಾರು 4.5 ಕಿ.ಮೀ ಉದ್ದದ ಮೇಲ್ಸುತುವೆ ನಿರ್ಮಿಸಲು 450 ಕೋಟಿ ರೂ.ಗಳ ಯೋಜನೆಯನ್ನು ಮುಖ್ಯಮಥ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಈ ಯೋಜನೆಯು ಕೇಂದ್ರ ಸರಕಾರದ ಸಹಯೋಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.  

ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಜನರ ಪಾಲಿನ ಆರಾಧ್ಯ ದೈವವಾದ ಸವದತ್ತಿ ಯಲ್ಲಮ್ಮನ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರವು ಅಭಿವೃದ್ಧಿ ಮಂಡಳಿ ರಚಿಸಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಸವದತ್ತಿ ಯಲ್ಲಮ್ಮನ ಕ್ಷೇತ್ರವನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವಂತೆ ಬಹುದಿನಗಳಿಂದ ಈ ಭಾಗದ ಜನತೆ ಬೇಡಿಕೆ ಸಲ್ಲಿಸುತ್ತಿದ್ದರು ಈಗ ಅದು ಸಾಕಾರಗೊಂಡಿದೆ. ಯಲ್ಲಮ್ಮನ ಕ್ಷೇತ್ರದ ಜೊತೆಗೆ ಆ ಭಾಗದ ಅನೇಕ ಸ್ಥಳಗಳನ್ನು ಅಭಿವೃದ್ದಿಗೊಳಿಸಿ ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಲು ಪ್ರಾಧಿಕಾರವು ಕ್ರಮ ಕೈಕೊಳ್ಳಲಿದೆ.