ನೂರಕ್ಕೆ ನೂರರಷ್ಟು ಮತದಾನವು ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ಆಗಲೇಬೇಕೆಂದು ಚುನಾವಣಾ ಆಯೋಗ, ಜಿಲ್ಲಾಡಳಿತ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೂ ಕೂಡ ಜನ ಹೊರಗೆ ಬಂದು ಮತದಾನ ಮಾಡುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷದಂತೆ ಈ ವರ್ಷವೂ ಕೂಡ ಬೆಳಗಾವಿ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಮತದಾನವಾಗಿಲ್ಲ. ಸುಶಿಕ್ಷಿತರನ್ನೇ ಹೊಂದಿರುವ ಬೆಳಗಾವಿ ಉತ್ತರ ಕ್ಷೇತ್ರವು ಕೇವಲ ಶೇ. 59.53 ಜನ ಮತ ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಅಂದಾಜು ಶೇ.76.16ರಷ್ಟು ಮತದಾನವಾಗಿದೆ.
ಬೆಳಗಾವಿ ಗ್ರಾಮೀಣ ಶೇ. 78.70 ಹಾಗೂ ದಕ್ಷಿಣ ಶೇ. 63.40ರಷ್ಟು ಮತದಾನವಾಗಿದೆ. ಜಿಲ್ಲೆಯ ಯಮಕನಮರಡಿ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ.82.24ರಷ್ಟು ಮತದಾರರು ಮತಚಲಾಯಿಸಿದ್ದಾರೆ.
ಕ್ರ. ಸಂ | ಕ್ಷೇತ್ರ | ಶೇಕಡಾವಾರು |
1 | ನಿಪ್ಪಾಣಿ | 81.2 |
2 | ಚಿಕ್ಕೋಡಿ-ಸದಲಗಾ | 81.47 |
3 | ಅಥಣಿ | 80.23 |
4 | ಕಾಗವಾಡ | 82.3 |
5 | ಕುಡಚಿ | 77.08 |
6 | ರೇಬ್ಯಾಗ್ | 77.1 |
7 | ಹುಕ್ಕೇರಿ | 80.3 |
8 | ಅರಭಾವಿ | 76.32 |
9 | ಗೋಕಾಕ್ | 76.13 |
10 | ಯೆಮಕನಮರ್ಡಿ | 82.24 |
11 | ಬೆಳಗಾವಿ ಉತ್ತರ | 59.53 |
12 | ಬೆಳಗಾವಿ ದಕ್ಷಿಣ | 63.4 |
13 | ಬೆಳಗಾವಿ ಗ್ರಾಮಾಂತರ | 78.7 |
14 | ಖಾನಾಪುರ | 74.23 |
15 | ಕಿತ್ತೂರು | 77.1 |
16 | ಬೈಲಹೊಂಗಲ | 76.16 |
17 | ಸೌಂದಟ್ಟಿ | 80.29 |
18 | ರಾಮದುರ್ಗ | 71.99 |
ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ಒಟ್ಟಾರೆ 187 ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಇದರಲ್ಲಿ 174 ಪುರುಷರು ಹಾಗೂ 13 ಮಹಿಳೆಯರು ಚುನಾವಣಾ ಕಣದಲ್ಲಿದ್ದರು.
ಜಿಲ್ಲೆಯಲ್ಲಿ ಒಟ್ಟಾರೆ 39,47,150 ಮತದಾರರಿದ್ದು, 20,424 ಸೇವಾ ಮತದಾರರು ಸೇರಿದಂತೆ ಒಟ್ಟು 39,67,574 ಜನರು ಮತದಾರರಿದ್ದರು. 18 ರಿಂದ 19 ವಯೋಮಾನದ 94,652 ಯುವ ಮತದಾರರು, 42, 761 ವಿಕಲಚೇತನ ಮತದಾರರು, 80 ವರ್ಷ ಮೇಲ್ಪಟ್ಟಿರುವ 1,00,095 ಹಾಗೂ 151 ಇತರೆ ಮತದಾರರಿದ್ದರು.
ಜಿಲ್ಲೆಯ ಹದಿನೆಂಟು ಮತಕ್ಷೇತ್ರಗಳಲ್ಲಿ 4434 ಮತಗಟ್ಟೆಗಳು ಮತ್ತು 5 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 4439 ಮತಗಟ್ಟೆಗಳಿದ್ದವು. ರಾಜ್ಯದಲ್ಲಿಯೇ ಬೆಳಗಾವಿಯಲ್ಲಿ ಅತೀ ಹೆಚ್ಚು ಜನರು ಮನೆಯಿಂದ ಮತದಾನ ಮಾಡಿರುತ್ತಾರೆ.
300 ಕ್ರಿಟಿಕಲ್ ಬೂತ್, 701 ವಲ್ನರೇಬಲ್ ಹಾಗೂ ಕ್ರಿಟಿಕಲ್ ಮತಗಟ್ಟೆಗಳಿದ್ದವು.ಭದ್ರತೆಗೆ ಒಟ್ಟು 10,913 ಪೋಲಿಸ್ ಅಧಿಕಾರಿ/ ಸಿಬ್ಬಂದಿಯನ್ನು ಮತ್ತು 21,600 ಜನ ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿತ್ತು.
ಮತ ಎಣಿಕೆ ಮೇ 13 ರಂದು ಬೆಳಗಾವಿ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.