ಬೆಳಗಾವಿ : ಜೀವಂತ ಗುಂಡಿನೊಂದಿಗೆ ಆಗಮಿಸಿದ್ದ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಇದೀಗ ವಿಚಾರಣೆಗೆ ಒಳಪಡುವಂತಾಗಿದೆ.
ಡೆಹ್ರಾಡೂನ್ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿ ಒಬ್ಬರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.
ಅವರು ಬೆಳಗಾವಿಯ ಕಮಾಂಡೋ ಸೆಂಟರ್ ಗೆ ತರಬೇತಿ ಮುಗಿಸಿ ವಾಪಸಾಗುವಾಗ ಅವರ ಬ್ಯಾಗಿನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. ಬೆಳಗಾವಿಯಿಂದ ಹೈದ್ರಾಬಾದ್ ಗೆ ಪ್ರಯಾಣಿಸುವ ವೇಳೆ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಆಗ ಜೀವಂತ ಗುಂಡು ಪತ್ತೆಯಾಗಿದೆ.
ತಕ್ಷಣ ಅಧಿಕಾರಿಯನ್ನು ಮಾರಿಹಾಳ ಪೊಲೀಸರ ವಶಕ್ಕೆ ನೀಡಲಾಗಿದೆ.