ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಲಿದ್ದು, ದೆ. ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಪ್ರಯತ್ನದ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಅಕ್ಟೋಬರ್ 1 ರಿಂದ ದೆಹಲಿ – ಬೆಳಗಾವಿ ನಡುವೆ ಪ್ರತಿದಿನ ವಿಮಾನಯಾನ ಪ್ರಾರಂಭಿಸಲು ಒಪ್ಪಿಕೊಂಡಿದ್ದು, ಸ್ಟಾರ ಏರ್‌ಲೈನ್ಸ್ ಅಕ್ಟೋಬರ್ 29 ರಿಂದ ಪುಣೆ – ಬೆಳಗಾವಿ ಮದ್ಯೆ  ವಿಮಾನ ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಅಲ್ಲದೆ, ಇಂಡಿಗೋ ಏರ್‌ಲೈನ್ಸ್ ಅಕ್ಟೋಬರ್ 31 ರಿಂದ ಪುಣೆ -ಬೆಳಗಾವಿ ನಡುವೆ ವಾರದಲ್ಲಿ ಮೂರು ದಿನ (ಮಂಗಳವಾರ, ಗುರುವಾರ ಮತ್ತು ಶನಿವಾರ) ವಿಮಾನಯಾನ ಸೇವೆ ಪ್ರಾರಂಭಿಸುತ್ತಿದೆ.

  • ಅಕ್ಟೋಬರ 1 ರಿಂದ ಬೆಳಗಾವಿಯಿಂದ ದೆಹಲಿಗೆ – ಪ್ರತಿದಿನ  ಇಂಡಿಗೋ
  • ಅಕ್ಟೋಬರ 29ರಿಂದ ಬೆಳಗಾವಿಯಿಂದ ಪುಣೆ – ಪ್ರತಿದಿನ – ಸ್ಟಾರ್ ಏರ್
  • ಅಕ್ಟೋಬರ 29ರಿಂದ ಪುಣೆಯಿಂದ ಬೆಳಗಾವಿಗೆ – ವಾರದಲ್ಲಿ  3 ದಿನ – ಇಂಡಿಗೋ
  • ಬೆಳಗಾವಿಯಿಂದ ದೆಹಲಿ ಮತ್ತು ಪುಣೆಗೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆಗಳನ್ನು ಆರಂಭಿಸಲು ನಿರ್ಧರಿಸಿರುವ ಇಂಡಿಗೋ ಮತ್ತು ಸ್ಟಾರ್ ಏರ್‌ಲೈನ್ಸ್‌ಗಳಿಗೆ ಜಿಲ್ಲೆಯ ಜನರ ಪರವಾಗಿ ಸಂಸದ ಈರಣ್ಣ ಕಡಾಡಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.