ಬೆಳಗಾವಿ : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿಯಾಗಿದ್ದು, ಅವರಿಂದ 11 ಲಕ್ಷ ನಗದು ಹಾಗೂ 11ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿಸಿದ್ದಾರೆ.
ದಿ. 18.12.2023 ರಂದು ಗೋಕಾಕದ ಸಿದ್ದಗೌಡ ಬಿರಾದರ ಅವರು ಕಾಕತಿಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿತರ ವಿರುದ್ಧ ಪ್ರ.ಸಂ. 264/23 ಕಲಂ. 419, 420 ಐಪಿಸಿ ಅಡಿ ವಂಚನೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿತ್ತು.
ಅದರಂತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಮಹಿಳೆ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1.ದೀಪಾ ಅವಟಗಿಯನ್ನು ಡಿಸೆಂಬರ 21 ರಂದು, 2.ಶಿವಾನಂದ ಮಠಪತಿ 3.ಅಪ್ಪಯ್ಯ ಪೂಜಾರಿ ಇವರನ್ನು 22ರಂದು ಹಾಗೂ 4.ಸುನಿಲ್ ವಿಭೂತಿ,
5.ಸಚಿನ್ ಕುಮಾರ್ ಅಂಬಲಿ, 6.ಭರತೇಶ್ ಅಗಸರ, 7.ಶಶಿಕುಮಾರ್ ದೊಡ್ಡನವರ್ ಇವರನ್ನು ದಿನಾಂಕ 23.12.23 ರಂದು ಬಂಧಿಸಳಾಗಿದೆ. ಹೀಗೆ ಒಟ್ಟು ಏಳು ಜನ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ
ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಎರಡು ವಾಹನ ಹಾಗೂ ಹನ್ನೊಂದು ಲಕ್ಷ ನಗದು ಹೀಗೆ ಒಟ್ಟು 22 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು, ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಾಕತಿ ಪೊಲೀಸರು ತಿಳಿಸಿದ್ದಾರೆ.