ಬೆಳಗಾವಿ, : ಝೀ ಕನ್ನಡ ವಾಹಿನಿ ಅವರು ಆಯೋಜಿಸಿರುವ ಸರಿಗಮಪ ಗಾಯನ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿ ಕೆಎಲ್ಇ ಸಂಸ್ಥೆಗೆ ಗೌರವ ತಂದಿರುವ ಕೆಎಲ್ಇ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸುಜಾತ ಹುಚ್ಚೇನಹಟ್ಟಿ ಅವಳನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಸನ್ಮಾನಿಸಿ ಗೌರವಿಸಿದ್ದಾರೆ.
“ಸೂರ್ಮಯಿ ಶಾಮ್” ಹಿಂದೂಸ್ತಾನಿ ಸಂಗೀತೋತ್ಸವ: ಪಶ್ಚಿಮ ಬಂಗಾಳದ ಖ್ಯಾತ ಗಾಯಕಿ ಮೀನಾಕ್ಷಿ ಮಜುಂದಾರ್ ಅವರು ಕೆಎಲ್‌ಇ ಸಂಗೀತ ಶಾಲೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸುಧೆ ನುಡಿಸಿದರು. ಪ್ರಾರಂಭದಲ್ಲಿ ರಾಗ ಮುಲ್ತಾನಿಯೊಂದಿಗೆ ಸಂಗೀತ ಸುಧೆ ಹೊರಹೊಮ್ಮಿಸಿದ ಅವರು, ರಾಗ ಯಮನ್, ಮಾರ್ವ, ಸೋಹನಿ, ಪುರಿಯಾದಲ್ಲಿ ಬಂದಿ ಷ್ ಹಾಡಿದರು.ಕೊನೆಯಲ್ಲಿ ಠುಮ್ರಿ ಮತ್ತು ಭೈರವಿ ಪ್ರಸ್ತುತ ಪಡಿಸಿದರು. ಅವರಿಗೆ ತಬಲಾ ರಾಹುಲ್ ಮಂಡೋಲ್ಕರ್ ಮತ್ತು ಶ್ರೀ ಸುರೇಶ ಫಡ್ತಾರೆ ಅವರಿಂದ ಸಂವಾದಿನಿ ಸಾಥ್ ನೀಡಿದರು. ಈ ಕಾರ್ಯಕ್ರಮಧಲ್ಲಿ
ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಜಾರಾಂ ಅಂಬರಡೇಕರ್, ಡಾ.ಸುನೀತಾ ಪಾಟೀಲ್, ಡಾ.ದುರ್ಗಾ ನಾಡಕರ್ಣಿ, ಯದ್ವೇಂದ್ರ ಪೂಜಾರಿ, ಜಿತೇಂದ್ರ ಸಾಬ್ಬಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.