ಬೆಳಗಾವಿ: ಮಕ್ಕಳಲ್ಲಿ ಕಂಡು ಬರುವ ಹೃದಯದ ಅಪರೂಪ ಖಾಯಿಲೆಯಾದ ಸಬ್‌ ಅಯೋಟಿಕ್‌ ಮೆಂಬರೇನ್ಸ(ಸ್ಯಾಮ್)‌ನಿಂದ ಬಳಲುತ್ತಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಇರಾಕಿನ ಅಝಲ ಎಂಬ 6 ವರ್ಷದ ಬಾಲಕಿಗೆ ನಗರದ ಹರಿಹಂತ ಆಸ್ಪತ್ರೆಯ ತಜ್ಞವೈದ್ಯರು ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿ ಪುನರಜನ್ಮ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಕ್ಕಳಲ್ಲಿ ಅಪರೂಪವಾಗಿ ಕಂಡು ಬರುವ ಸಬ್ ಅಯೋಟಿಕ್ ಮೆಂಬರೇನ್ಸ್ (ಸ್ಯಾಮ್) ರೋಗದಿಂದ ಬಳಲುತ್ತಿದ್ದ ಬಾಲಕಿಯನ್ನು ಸ್ಥಳೀಯ ವೈದ್ಯರು ಪರೀಕ್ಷಿಸಿ, ಹೃದಯದಲ್ಲಿ ಪೊರೆಯನ್ನು ಒಳಗೊಂಡಿರುತ್ತದೆ, ಸಾಮಾನ್ಯವಾಗಿ ಮಹಾಪಧಮನಿಯ ಅಡಿಯಲ್ಲಿ ಸ್ನಾಯು (ದ್ರವ್ಯರಾಶಿ) ಬೆಳೆದು  ಎಡಭಾಗದ ರಕ್ತದಲ್ಲಿ ರಕ್ತ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿರುವದು ಕಂಡು ಬಂದಿತು. ಆಗ ವೈದ್ಯರು ಶೀಘ್ರವೇ ಶಸ್ತ್ರಚಿಕಿತ್ಸೆ ಅವಶ್ಯವಿದೆ. ಅದಕ್ಕಾಗಿ ವಿದೇಶದಲ್ಲಿ ಶಸ್ತ್ರಚಿಕಿತ್ಸೆ ನೆರವೇರಸಿಬೇಕಾಗುತ್ತದೆ ಎಂದಾಗ ಆಘಾತಕ್ಕೊಳಗಾದ ಬಾಲಕಿಯ ಪಾಲಕರು ತಡಕಾಡಿದಾಗ ಕೈಗೆಟಕುವ ದರದಲ್ಲಿ ಹಾಗೂ ಸ್ನೇಹಪರವಾದ ಆಸ್ಪತ್ರೆಯನ್ನಾಗಿ ಕಂಡಿದ್ದ ಹರಿಹಂತ ಆಸ್ಪತ್ರೆ ಹಾಗೂ ಡಾ. ಎಂ ಡಿ ದಿಕ್ಷಿತ ಅವರನ್ನು ಆಯ್ಕೆ ಆಯ್ಕೆಮಾಡಿಕೊಂಡು ಭಾರತಕ್ಕೆ ಆಗಮಿಸಿದರು.

ಆಸ್ಪತ್ರೆಗೆ ಆಗಮಿಸಿದ ತಕ್ಷಣ ಸಕಲ ತಪಾಸಣೆಗೊಳ್ಪಡಿಸಿದಾಗ ಹೃದಯದ ತೀವ್ರ ತೊಂದರೆ ಕಂಡು ಬಂದಿತು. ಅಲ್ಲದೇ ಈ ಹಿಂದೆಯೂ ಬಾಲಕಿಗೆ 2018ರಲ್ಲಿ ಬೇರೆ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಆದರೆ ಮತ್ತೆ ತೊಂದರೆಗೊಳಗಾದಾಗ ಬೆಂಗಳೂರಿನ ವೈದ್ಯರ ಸಲಹೆ ಮೇರೆಗೆ ದೂರದ ಇರಾಕನಿಂದ ಬೆಳಗಾವಿ ನಗರದ ಹರಿಹಂತ ಆಸ್ಪತ್ರೆಯನ್ನು ಹುಡುಕಿಕೊಂಡು ಬಂದು ಶಸ್ತ್ರಚಿಕಿತ್ಸೆಗೊಳಗಾದರು.  ಒಂದು ವರ್ಷದಲ್ಲಿ ಇರಾಕಿನ 3 ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಸಿದಿ ಡಾ. ಎಂ ಡಿ ದಿಕ್ಷಿತ ಹಾಗೂ ಅವರ ತಂಡ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ಕಾರ್ಯವೈಖರಿಗೆ ಪೋಷಕರು ಸಂತೋಷ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಅಧ್ಯಕ್ಷ ಸಹಕಾರರತ್ನ ರಾವ ಸಾಹೆಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ, ಯುವ ಮುಖಂಡ ಉತ್ತಮ ಪಾಟೀಲ ಅವರು ಅಝಲ ಅವರ ಆರೋಗ್ಯ ವಿಚಾರಿಸಿ ಶುಭ ಆರೈಸಿದ್ದಾರೆ.

ಅಝಲ ಅಲಿ ಸುಭಿ ಇರಾಕಿನ ನಜೀಫ ಕುಫಾ ನಿವಾಸಿಯಾಗಿದ್ದು, ಇರಾಕ್‌ನಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ತಜ್ಞ ವೈದ್ಯರಿಲ್ಲದ ಕಾರಣ, ಅಲ್ಲಿನ ವೈದ್ಯರು ಅಝಲನ ಪೋಷಕರಿಗೆ ಬೇರೆ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವಂತೆ ಸಲಹೆ ನೀಡಿದರು. ಆದರೆ ಅಝಲನ ಪೋಷಕರು ಬೇರೆ ದೇಶಗಳ ಬದಲು ಭಾರತವನ್ನು ಆಯ್ಕೆ ಮಾಡಿಕೊಂಡು ಡಾ.  ಎಂ.  ಡಿ.  ದೀಕ್ಷಿತ ಅವರಿಂದ ಶಸ್ತ್ರಚಿಕಿತ್ಸೆ ನೆರವೇರಿಸಿಕೊಂಡಿರುವದು ಬೆಳಗಾವಿಯ ಅದರಲ್ಲಿಯೂ ಅರಿಹಂತ ಆಸ್ಪತ್ರೆಯ ಹೆಸರು ಕೆಲವೇ ದಿನಗಳಲ್ಲಿ ಸಾಗರದಾಚೆಯೂ ಹರಡಿದೆ.

 ನಮಗೂ ಹೊಸ ಬದುಕು ಸಿಕ್ಕಿತು

 ಕೆಲವು ದಿನಗಳಿಂದ ಅಝಲ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.  ಆ ಸಮಯದಲ್ಲಿ ನಾವು ಅವಳನ್ನು ಇರಾಕನಲ್ಲಿ ವೈದ್ಯರಿಂದ ಪರೀಕ್ಷಿಸಿದೆವು.  ಆ ವೇಳೆ ಸ್ಥಳೀಯ ವೈದ್ಯರು ಅಝಲಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ಹೇಳಿದಾಗ ನಮಗೆ ಆಘಾತವಾಯಿತು.  ನಮ್ಮ ಸ್ನೇಹಿತರೊಂದಿಗೆ ಚರ್ಚಿಸಿದ ನಂತರ, ಡಾ.  ಎಂ.  ಡಿ.  ದೀಕ್ಷಿತ ಅವರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿ ಭಾರತಕ್ಕೆ ಬಂದು ಅಝಲನ ಶಸ್ತ್ರಚಿಕಿತ್ಸೆ ನಡೆಸಿದೆವು.  ಈಗ ಅಝಲನ ಸ್ಥಿತಿ ಸ್ಥಿರವಾಗಿದ್ದು,   ಡಾ.  ಎಂ.  ಡಿ.  ದೀಕ್ಷಿತ ಅವರು ಅಝಲ ಮತ್ತು ನಮಗೂ ಹೊಸ ಜೀವನ ನೀಡಿದ್ದಾರೆ, ಎಂದು ಅಝಲ ತಂದೆ ಸಾಬಿ ಅಲಿ ಸುಭಿ ಹೇಳಿದ್ದಾರೆ.