ತಿರುವನಂತಪುರಂ: ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಹೆಚ್ಚುವರಿ ವ್ಯವಸ್ಥೆ ಮತ್ತು ಸೌಲಭ್ಯಗಳನ್ನು ಶಬರಿಮಲೆ ದೇವಸ್ವಂ ಮಂಡಳಿ ಪ್ರಕಟಿಸಿದ್ದು, ಟಾಟಾ ಕನ್ಸಲ್ಟೆನ್ಸಿಯು ವರ್ಚುವಲ್ ಕ್ಯೂ ಪೋರ್ಟಲ್‌ನ್ನು ಉನ್ನತೀಕರಿಸಲು ತಾಂತ್ರಿಕ ಸಹಾಯ ಕಲ್ಪಿಸಲಿದೆ.  ಪೋರ್ಟಲ್ ಕ್ಯೂ ಮತ್ತು ಪ್ರಸಾದ ಬುಕಿಂಗ್ ವ್ಯವಸ್ಥೆಗಳನ್ನು ಒಳಗೊಂಡಿದೆ. ಪ್ರಸಾದ ಬುಕಿಂಗ್ ರದ್ದುಗೊಂಡರೆ, ಹಣವನ್ನು ನೇರವಾಗಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುತ್ತದೆ ಎಂದು ದೇವಸ್ವ ಮಂಡಳಿ ತಿಳಿಸಿದೆ.

ಆನ್‌ಲೈನ್‌ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ, ತಡವಾಗಿ ಬಂದರೂ ಕೂಡ ಭಕ್ತಾದಿಗಳಿಗೆ ವಸತಿಯನ್ನು ನೀಡಲಾಗುತ್ತದೆ. ಅವರಿಗೆ ಶಬರಿಮಲೆಯ ಪಂಪಾದಲ್ಲಿ ವಿಶೇಷ ಚೆಕ್-ಇನ್ ಕೌಂಟರ್ ತೆರೆಯಲಾಗುವುದು.  ಪ್ರಯಾಣದದಲ್ಲಿ ವಿಳಂಬವಾದರೂ ಕೂಡ 24 ಗಂಟೆಗಳ ಕಾಲ ಹೆಚ್ಚುವರಿ (ನಿಗದಿತ ಸಮಯದ ಮೊದಲು ಅಥವಾ ನಂತರ) ಅವಧಿಯನ್ನು ನೀಡಲಾಗುತ್ತದೆ.  ತಡವಾಗಿ ಬರುವ ಭಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಪಂಪಾದಲ್ಲಿ ವಿಶೇಷ ಕೌಂಟರ ತೆರೆಯಲಾಗುತ್ತದೆ,

ಸುಮಾರು 3 ಸಾವಿರ ಕುಡಿಯುವ ನೀರಿನ ಸ್ಟೀಲ್‌ ಬಾಟಲಗಳನ್ನು ಪ್ರಾಯೋಜಕರು ನೀಡುತ್ತಿದ್ದು, 100 ರೂ.ಗಳನ್ನು ಪಾವತಿಸಿ ಆ ನೀರಿನ ಬಾಟಲ್ಗಳನ್ನು ನೀಡಲು ದೇವಸ್ವಂ ಮಂಡಳಿ ನಿರ್ಧರಿಸಿದೆ.  ದೇವರ ದರ್ಶನ ಪಡೆದು ಬೆಟ್ಟವನ್ನು ಇಳಿದ ನಂತರ,  ಬಾಟಲನ್ನು ಹಿಂತಿರುಗಿಸಿದರೆ ಠೇವಣಿಚಹಣವನ್ನು ಮರಳಿ ನೀಡಲಾಗುತ್ತದೆ.

ಇದೇ ವೇಳೆ ತಮಿಳುನಾಡು ಸರ್ಕಾರ ಕೂಡ ಭಕ್ತರಿಗೆ ಅನ್ನದಾನ ಮಾಡಲು ಸಹಾಯ ನೀಡಿದೆ. ದರ್ಶನದ ಸಾಲಿನಲ್ಲಿ ನಿಂತಿರುವ ಭಕ್ತರಿಗೆ 25 ಲಕ್ಷ ಬಿಸ್ಕತ್‌ ಪ್ಯಾಕೆಟ್‌ಗಳನ್ನು ನೀಡಲಿದ್ದಾರೆ. ಪಂಪಾ ಮತ್ತು ನಿಲಕ್ಕಲ್‌ನಲ್ಲಿ ವೈ-ಫೈ ಸೌಲಭ್ಯವನ್ನೂ ಕೂಡ ಪರಿಚಯಿಸುವ ಯೋಜನೆ ರೂಪಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

ಹೊಸ ಬದಲಾವಣೆಗಳು: ಪತ್ತಿನೆಟ್ಟಂಪಾಡಿ, ತಿರುಮುಟ್ಟಂ ಮತ್ತು ಸೋಪಾನಂನಲ್ಲಿ ಮೊಬೈಲ್ ಫೋನ್‌ಗಳ ನಿಷೇಧವನ್ನು ಮುಂದುವರಿಸಲಾಗಿದ್ದು,  ಸಂವಹನಕ್ಕಾಗಿ ಅಧಿಕಾರಿಗಳಿಗೆ ವಾಕಿ-ಟಾಕಿಗಳನ್ನು ಒದಗಿಸಲಾಗುವುದು.  ಬೇರೆ ರಾಜ್ಯಗಳ ಭಕ್ತರಿಗಾಗಿ ವಿವಿಧ ಭಾಷೆಗಳಲ್ಲಿ ಫೋನ್ ಬಳಕೆ ನಿರ್ಬಂಧಗಳನ್ನು ಪ್ರದರ್ಶಿಸುವ ಬೋರ್ಡ್‌ಗಳನ್ನು ಸ್ಥಾಪಿಸಲಾಗುವುದು.  ಧ್ವನಿವರ್ಧಕಗಳ ಮೂಲಕ ಈ ಕುರಿತು ತಿಳಿಸಲಾಗುವದು.

ಅಯ್ಯಪ್ಪ ಭಕ್ತರು ಮತ್ತು ಚಾರಿಟಬಲ್ ಟ್ರಸ್ಟ್‌ಗಳು ವರ್ಷಗಳ ಹಿಂದೆ ನಿರ್ಮಿಸಿದ ದಾನಿಗಳ ಕೊಠಡಿಗಳನ್ನು ಸನ್ನಿಧಾನಂನಲ್ಲಿ ಯಾತ್ರಾರ್ಥಿಗಳಿಗೆ ಬಾಡಿಗೆಗೆ ನೀಡಲಾಗಿದೆ.  ಹೊಸ ಬದಲಾವಣೆಗಳ ಪ್ರಕಾರ, ಕೊಠಡಿಗಳ ಮಾಲೀಕತ್ವವನ್ನು ದಾನಿಗಳ ವ್ಯಕ್ತಿಯ ಮರಣದ ನಂತರ ಅವರ ವಂಶಸ್ಥರಿಗೆ ವರ್ಗಾಯಿಸಲಾಗುವುದಿಲ್ಲ.