ಬೆಳಗಾವಿ : ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ
ಮರ ಉರಳಿಬಿದ್ದು ಓರ್ವ ಯುವಕ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ತಾಲೂಕಿನ ಬೆಳಗುಂದಿ ಗ್ರಾಮದ
ಸೋಮನಾಥ ಮುಚ್ಚಂಡಿಕರ್ (19) ಎನ್ನುವ ಯುವ ಮೃತಪಟ್ಟ ದುರ್ಧೈವಿಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಜೀವನ್ಮರಣ ನಡುವೆ ಹೋರಾಡುತ್ತಿದ್ದಾರೆ. ದ್ವಿಚಕ್ರ ವಾಹನದ ಮೇಲೆ ಸಾಗುತ್ತಿದ್ದಾಗ ಮಳೆಯಿಂದ ಮರ ಮುಗುಚಿ ಬಿದ್ದು ಘಟನೆ ಸಂಭವಿಸಿದೆ. ಘಟನೆಯ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮರವನ್ನು ಸ್ಥಳಾಂತರಿಸಿ ರಸ್ತೆ ಸಂಚಾರವನ್ನು ಮುಕ್ತಗೊಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರಾಕಾರ ಮಳೆ: ಮರಬಿದ್ದು ಯುವಕ ಸಾವು
