ಬೆಳಗಾವಿ : ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ದೇಶದ ಅತ್ಯಂತ ಹಳೆಯ ಬೆಳಗಾವಿಯ ವಿಮಾನ ನಿಲ್ದಾಣ ಇದೀಗ ರಾಜ್ಯದ ಅತ್ಯಂತ ಜನದಟ್ಟಣೆಯ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿದ್ದು, ಮೂರನೆ ಸ್ಥಾನವನ್ನು ಕಾಯ್ದುಕೊಂಡಿದೆ.
ಬೆಳಗಾವಿ ಮೂಲಕ ದೇಶದ ವಿವಿಧ ನಗರಗಳಿಗೆ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದಾರೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ ಏಪ್ರೀಲ್ ತಿಂಗಳಲ್ಲಿ 31060 ಜನರು ಪ್ರಾಯಾಣ ಕೈಕೊಂಡಿದ್ದಾರೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಸದ್ಯ ದೇಶದ ಒಂಬತ್ತು ನಗರಗಳಿಗೆ ವಿಮಾನಗಳು ಬೆಳಗಾವಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿವೆ.
ಏಪ್ರಿಲ್ ತಿಂಗಳಲ್ಲಿ 31,060 ಪ್ರಯಾಣಿಕರು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರವು ತಿಳಿಸಿದೆ. ಏಪ್ರಿಲ್ ತಿಂಗಳಿನಲ್ಲಿ ಶೇ.2.5ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಜೂನ್ ತಿಂಗಳಿನಿಂದ ದೇಶದ ಹತ್ತು ಪ್ರಮುಖ ನಗರಗಳಿಗೆ ವಿಮಾನ ನಿಲ್ದಾಣದಿಂದ ಸೇವೆಗಳನ್ನು ಒದಗಿಸಲಾಗುತ್ತಿದೆ, ಬೆಳಗಾವಿ-ಸೂರತ್ ವಿಮಾನವನ್ನು ರದ್ದುಗೊಳಿಸಲಾಗಿದ್ದು, ಇತರ ನಗರಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಅಹಮದಾಬಾದ್, ನಾಗ್ಪುರ, ಜೋಧ್ಪುರ, ಜೈಪುರ ಮತ್ತು ತಿರುಪತಿ ನಗರಗಳಲ್ಲಿ ಸೇವೆ ನೀಡಲಾಗುತ್ತಿದೆ. ಜನವರಿ ತಿಂಗಳಲ್ಲಿ 29,614 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಫೆಬ್ರುವರಿಯಲ್ಲಿ ಕೊಂಚ ಇಳಿಕೆಯಾಗಿದೆ. ಈ ತಿಂಗಳಲ್ಲಿ 29,530 ಪ್ರಯಾಣಿಕರು, ಮಾರ್ಚ್ನಲ್ಲಿ 30,290 ಮತ್ತು ಏಪ್ರಿಲ್ನಲ್ಲಿ 39,060 ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಬೆಳಗಾವಿ ವಿಮಾನ ನಿಲ್ದಾಣವು 30,000 ಪ್ರಯಾಣಿಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಪ್ರಯಾಣಿಕರ ಸಂಖ್ಯೆ ಜತೆಗೆ ಸರಕು ಸಾಗಣೆಯೂ ಹೆಚ್ಚುತ್ತಿದೆ. ಕಳೆದ ತಿಂಗಳು 17 ಮೆಟ್ರಿಕ್ ಟನ್ ವಸ್ತುಗಳ ಸಾಗಣೆಯಾಗಿದೆ. ಹಾಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣ ಮೂರನೇ ಸ್ಥಾನಕ್ಕೆ ಬಂದಿದೆ.
ಎರಡನೇ ರಾಜಧಾನಿ ಹಿರಿಮೆಯ ಬೆಳಗಾವಿ ವಿಮಾನ ನಿಲ್ದಾಣ ದಿನೇ ದಿನೇ ಪ್ರಯಾಣಿಕರನ್ನು ಆಕರ್ಷಿಸುತ್ತಿರುವುದು ಬೆಳಗಾವಿ ಅಭಿವೃದ್ಧಿ ದಿಸೆಯಲ್ಲಿ ಹೊಸ ಹೆಜ್ಜೆಯಾಗಿದೆ.