ಬೆಳಗಾವಿ: ಹಿಪ್ಪರಗಿ ಆಣೆಕಟ್ಟು ಹಿನ್ನೀರು ನೀರಾವರಿ ನಿಗಮದ ನೌಕರರೊಬ್ಬರು ಅಥಣಿಯ ಕಚೇರಿಯ ಹೊರಾಂಗಣದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಕುಮಾರ ಬಸಯ್ಯ ಧುಮ್ಕಿಮಠ (49) ಮೃತ ದುರ್ದೈವಿ. ಇಲಾಖೆ ಆವರಣದ ಪಕ್ಕದಲ್ಲಿದ್ದ ಬೇವಿನ ಮರಕ್ಕೆ ನಿನ್ನೆ ತಡ ರಾತ್ರಿ ನೇಣಿಗೆ ಶರಣಾಗಿದ್ದಾರೆ. ಸುಮಾರು 20 ವರ್ಷ ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕುಮಾರ, ಕಳೆದ ಮೂರು ತಿಂಗಳಿಂದ ಕೆಲಸಕ್ಕೆ ಬಾರದೆ ರಜೆಯಲ್ಲಿದ್ದ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ.
ನೀರಾವರಿ ಇಲಾಖೆ ನೌಕರ ಆತ್ಮಹತ್ಯೆ
