ಅಥಣಿ : ಹೊಲಕ್ಕೆ ನೀರು ಹಾಯಿಸುವ ಜಮೀನಿನಲ್ಲಿದ್ದ ಪಂಪ್ ಸೆಟ್ ಬಂದ್ ಮಾಡಲು ತೆರಳಿದ್ದ ತಂದೆ-ಮಗನಿಗೆ ವಿದ್ಯುತ್ ಸ್ಪರ್ಶಸಿ ಸ್ಥಳದಲ್ಲಿಯೇ ಮೃತಪಟ್ಟಿರುವ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32)ಮತ್ತು ಅವರ 6 ವರ್ಷದ ಪುತ್ರ ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (6)ಮೃತಪಟ್ಟವರು. ಪ್ರೀತಮ್ ಅಥಣಿಯ ಶಾರದಾ ಮಾತಾ ವಿದ್ಯಾಲಯದಲ್ಲಿ ಒಂದನೇಯ ತರಗತಿಯಲ್ಲಿ ಓದುತ್ತಿದ್ದಾನೆ.

ಮಲ್ಲಿಕಾರ್ಜುನ ಅವರು ಜಮೀನಿನಲ್ಲಿ ಪಂಪ್ ಸೆಟ್ ಬಂದ್ ಮಾಡಲು ತೆರಳಿದಾಗ ರಸ್ತೆ ಮಧ್ಯೆ ಕೇಬಲ್ ಕತ್ತರಿಸಿ ಬಿದ್ದಿತ್ತು. ಸ್ಥಳದಲ್ಲಿ ತೇವಾಂಶವಿದ್ದ ಕಾರಣ ವಿದ್ಯುತ ಪ್ರವಹಿಸಿ ಸಾವನ್ನಪ್ಪಿದ್ದಾರೆ.