ಬೆಳಗಾವಿ,: ಈ ಮೊದಲು ಬೆಂಗಳೂರಿನಿಂದ ಬೆಳಗಾವಿಗೆ 7.35ಕ್ಕೆ ಆಗಮಿಸುತ್ತಿದ್ದ ಬೆಂಗಳೂರು-ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಈಗ ಬೆಳಗಾವಿಗೆ ಬೆಳಿಗ್ಗೆ 6.45ಕ್ಕೆ ತಲುಪಲಿದೆ. ಬೆಂಗಳೂರಿನಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 3.30 ರ ಸುಮಾರಿಗೆ ಹುಬ್ಬಳ್ಳಿಗೆ ಆಗಮಿಸುತ್ತದೆ. ವೇಳಾ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಸುಮಾರು 50 ನಿಮಿಷಗಳ ಕಾಲ ಮುಂಚಿತವಾಗಿ ಬೆಳಗಾವಿಯನ್ನು .ತಲುಪಬಹುದಾಗಿದೆ. ಕಳೆದ ದಿ. 21/03/2024 ರಿಂದ ಈ ವೇಳಾಪಟ್ಟಿಯು ಜಾರಿಗೆ ಬರಲಿದೆ.  ಹಾಗಾಗಿ ಸದ್ಯಕ್ಕೆ ರೈಲು ಹುಬ್ಬಳ್ಳಿಯಲ್ಲಿ ಅನಗತ್ಯವಾಗಿ ಒಂದು ಗಂಟೆ ನಿಲುಗಡೆ ಆಗಲಿದೆ. ಕಳೆದ ಅಕ್ಟೋಬರ್ 1 ರಿಂದ ಈ ರೈಲು ಹುಬ್ಬಳ್ಳಿಯಲ್ಲಿ ಅನಾವಶ್ಯಕವಾಗಿ ಒಂದು ಗಂಟೆ ನಿಲುಗಡೆ ಮಾಡಿ, ಬೆಳಗಾವಿ ತಲುಪಲು ವಿಳಂಬವಾಗುತ್ತಿದೆ. ಅಲ್ಲದೇ ಹೆಚ್ಚುವರಿಯಾಗಿ, ಮಾರ್ಗದಲ್ಲಿ  ಮದ್ಯದ ಲೋಂಡಾದಲ್ಲಿ 10-15 ನಿಮಿಷಗಳ ಕಾಲ ಹಾಗೂ ಖಾನಾಪುರದಲ್ಲಿ ಕೆಲ ಸಮಯ ನಿಲುಗಡೆ ಮಾಡಲಾಗುತ್ತಿದೆ.  ಈಗ ಸಮಯ ಬದಲಾವಣೆಯೊಂದಿಗೆ: TN-20653 SBC-BGM EXP W.E.F 21.03.2024 ರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ರೈಲಿನ ವೇಗವನ್ನು ಹೆಚ್ಚಿಸಲಾಗಿದೆ