ಬೆಳಗಾವಿ : ಹೆದ್ದಾರಿ ಗಸ್ತು 112 ಪೊಲೀಸ್ ವಾಹನದ ಕರ್ತವ್ಯ ನಿರತ ಇಬ್ಬರು ಪೊಲೀಸರು ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಹಿನ್ನಲೆಯಲ್ಲಿ ಅವರನ್ನು ಅಮನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ ಅವರು ಆದೇಶ ಹೊರಡಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಹೊರವಲಯದಲ್ಲಿ ತಮ್ಮ ವಾಹನದ ಪಕ್ಕದಲ್ಲಿಯೇ ಕುಳಿತು ಎಣ್ಣೆ ಪಾರ್ಟಿಯಲ್ಲಿ ತೊಡಗಿದ್ದರು. ಜತೆಗೆ ಮಾಂಸಾಹಾರ ಸೇವಿಸುತ್ತಿರುವದು ಕಂಡುಬಂದಿತ್ತು. ಕೆಎ 22 ಜಿ 1818 ಸಂಖ್ಯೆಯ 112 ವಾಹನದ ಪೊಲೀಸ್ ಕಾನ್ಸ್ಟೇಬಲ್ ಆದ ಕಮತೆ ಮತ್ತು ಧುಮಾಳ ಈ ಅಮಾನತುಗೊಂಡ ಪೊಲೀಸ ಸಿಬ್ಬಂದಿಯಾಗಿದ್ದಾರೆ.