ಬೆಳಗಾವಿ,:ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಯು ಅತ್ಯಾಧುನಿಕ “ಹೈಪರ್‌ಆರ್ಕ್” ತಂತ್ರಜ್ಞಾನ ಮೂಲಕ ಕ್ಯಾನ್ಸರ ರೋಗಿಗಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದು, ಪ್ರಥಮವಾಗಿ ಇತ್ತೀಚೆಗೆ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಕ್ಯಾನ್ಸರ ರೋಗಿಗಳಿಗೆ ವರದಾನವಾಗಿದ್ದು, ಮತ್ತೊಂದು ಯಶಸ್ಸಿನ ಮೈಲಿಗಲ್ಲು ಸಾಧಿಸಿದೆ. ಮೆದುಳಿನಲ್ಲಿ ದ್ವಿತೀಯ ಹಂತದ ಮೆಟಾಸ್ಟಾಸಿಸ್ ಹಾಗೂ ಪ್ರಥಮ ಹಂತದ ಮೂತ್ರಪಿಂಡದ ಕ್ಯಾನ್ಸರನಿಂದ ಬಳಲುತ್ತಿದ್ದ ರೋಗಿಗೆ ಅತ್ಯಾಧುನಿಕವಾದ ಹೈಪರಆರ್ಕ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಈಗ ಗುಣಮುಖ ಹೊಂದಿದ್ದಾರೆ.
ಹೈಪರ ಆರ್ಕ ಎನ್ನುವದು ಲಿನಾಕ್-ಆಧಾರಿತ ಅತ್ಯಾಧುನಿಕ ತಂತ್ರಜ್ಞಾನವಾದ ವೇರಿಯನ್ ಟ್ರೂಬೀಮ್ ಲೀನಿಯರ್ ವೇಗವರ್ಧಕದಲ್ಲಿ ಕಾರ್ಯನಿರ್ವಹಿಸುತ್ತದೆ. 2.5ಎಂಎA ಲೀಫ್, ಮಿಲೇನಿಯಮ್ ಮಲ್ಟಿ-ಲೀಫ್ ಕೊಲಿಮೇಟರ್ (ಎಂಎಲ್‌ಸಿ) ಅನ್ನು ಒಳಗೊಂಡಿದೆ. 3ಡಿ ಇಮೇಜ್ ತಂತ್ರಜ್ಞಾನದಿAದ ನಿರ್ದೇಶಿಸಲ್ಪಟ್ಟ ಅತ್ಯಂತ ನಿರ್ಧಿಷ್ಠವಾದ ಹಾಗೂ ನಿಖರತೆಯನ್ನು ಖಾತ್ರಿಪಡಿಸುವ ಸ್ಟೀರಿಯೊಟಾಕ್ಟಿಕ್ ರೇಡಿಯೊ (ಎಸ್‌ಆರ್‌ಎಸ್) ಯೋಜನಾಬದ್ದವಾದ ಚಿಕಿತ್ಸೆ ನೀಡುವಲ್ಲಿ ಅತ್ಯಂತ ಸೂಕ್ಷö್ಮ ಕಿರಣಗಳನ್ನು ಬಳಸಿಕೊಳ್ಳುತ್ತದೆ. ಅತ್ಯಂತ ಸಂಕೀರ್ಣವಾದ ಕಾರ್ಯವಿಧಾನವನ್ನು ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳಿಸುವದಲ್ಲದೇ ಚಿಕಿತ್ಸೆಯ ಸಮಯವನ್ನು ಕಡಿಮೆ ಮಾಡುತ್ತದೆ.
ಗಾಮಾ ನೈಫ್ ಅಥವಾ ಸೈಬರ್‌ನೈಫ್ ವಿಮ್ಯಾಟ ತಂತ್ರಜ್ಞಾನವು ಸಾಮಾನ್ಯವಾಗಿ 45 ನಿಮಿಷಗಳನ್ನು ತೆಗೆದುಕೊಂಡರೆ, ಹೈಪರ ಆರ್ಕ ಕರ‍್ಯವಿಧಾನವು ಸಂಪೂರ್ಣ ಚಿಕಿತ್ಸೆಗಾಗಿ 5 ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಕೆಎಲ್‌ಇ ಕ್ಯಾನ್ಸರ ಆಸ್ಪತ್ರೆಯು ರೆಡಿಯೇಶನ್ ಅಂಕಾಲಾಜಿ ಸೇವೆಗಳಿಗೆ ಹೆಸರುವಾಸಿಯಾಗಿದ್ದು, ಆರೋಗ್ಯ ರಕ್ಷಣೆಯಲ್ಲಿ ಗಮನಾರ್ಹವಾದ ಸೇವೆಯನ್ನು ಕಲ್ಪಿಸುತ್ತಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದಲ್ಲಿ ಪ್ರಥಮವಾದ ಈ ಸೇವೆಯು ಅತ್ಯಾಧುನಿಕ ಕ್ಯಾನ್ಸರ್ ಆರೈಕೆಯನ್ನು ಈ ಭಾಗದ ಜನರಿಗೆ ಕೈಗೆಟಕುವ ದರದಲ್ಲಿ ಸುಲಭವಾಗಿ ಲಭಿಸುವಂತೆ ಮಾಡಲಾಗಿದೆ.
ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಡಾ. ಎಂ ವಿ ಜಾಲಿ ಅವರು, ಡಾ. ಇಮ್ತಿಯಾಜ್ ಅಹ್ಮದ್ (ವಿಭಾಗ ಮುಖ್ಯರ‍್ಥು), ಡಾ. ಸಪ್ನಾ ಕೆ, ಡಾ. ರಾಘವೇಂದ್ರ ಸಾಗರ್ ಮತ್ತು ಶ್ರೀ ಬೂಪಾಲನ್ ಬಾಲಾಜಿ ಅವರಂತ ನುರಿತ ತಜ್ಞವೈದ್ಯರನ್ನು ಹೊಂದಿರುವ ಆಸ್ಪತ್ರೆಯು 3ನೇ ಹಂತದ ಆರ್‌ಎಸ್‌ಒ ಗುಣಮಟ್ಟ ಹೊಂದಿದ್ದು, ಸಮರ್ಪಣಾ ಮನೋಭಾವ ಹಾಗೂ ನುರಿತ ತಜ್ಞವೈದ್ಯರ ತಂಡವನ್ನು ಹೊಂದಿದೆ. ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿಯ ಫಲವಾಗಿ ವಿಶ್ವದರ್ಜೆಯ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ನಿರತವಾಗಿದ್ದು, ಈ ಭಾಗದಲ್ಲಿ ಪ್ರಮುಖ ಆರೋಗ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದ್ದಾರೆ.
ಹೈಪರ ಆರ್ಕ ತಂತ್ರಜ್ಞಾನದ ಮೂಲಕ ತಕ್ಷಣವೇ ಚಿಕಿತ್ಸೆಯನ್ನು ಪೂರ್ಣಗೊಳಿಸಿ ರೋಗಿಯನ್ನು ಸ್ವಲ್ಪ ಸಮಯದಲ್ಲಿಯೆ ಗುಣಮುಖಗೊಳಿಸಿದ ರೆಡಿಯೇಶನ ಅಂಕಾಲಾಜಿ ಯಶಸ್ವಿ ತಂಡದ ತಜ್ಞವೈದ್ಯರನ್ನು ಕೆಎಲ್‌ಇ ಸಂಸ್ಥೆಯ ತಜ್ಞವೈದ್ಯರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಕಾಹೆರನ ಉಪಕುಲಪತಿ ಡಾ ನಿತಿನ್ ಗಂಗಾನೆ, ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಡಾ.ವಿ.ಡಿ.ಪಾಟೀಲ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಡಾ.ಎನ್. ಎಸ್ .ಮಹಾಂತಶೆಟ್ಟಿ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.(ಕರ್ನಲ್) ಎಂ. ದಯಾನಂದ, ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಅಭಿನಂದಿಸಿದ್ದಾರೆ.