ಬೆಳಗಾವಿ : ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಪ್ಪಾಣಿ, ಖಾನಾಪುರ ತಾಲ್ಲೂಕುಗಳ ಮತ್ತು ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿನ ಎಲ್ಲ ಅಂಗನವಾಡಿ ಕೇಂದ್ರಗಳು/ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ಬುಧವಾರ(ಜುಲೈ 8) ರಜೆಯನ್ನು ಘೋಷಿಸಲಾಗಿದೆ.
ಪಿಯು ಕಾಲೇಜುಗಳಿಗೂ ರಜೆ: ಮೂರು ತಾಲೂಕು ವ್ಯಾಪ್ತಿಯಲ್ಲಿ ಪಿಯುಸಿ ಹಾಗೂ ಸಮವರ್ತಿತ ಕಾಲೇಜುಗಳಿಗೂ ಬುಧವಾರ(ಜುಲೈ 8) ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿದ್ದಾರೆ
