ನೇಗಿನಹಾಳ,: ಕನ್ನಡ ಭಾಷಾ ಬೆಳವಣಿಗೆ ಪ್ರಸಕ್ತ ರಾಜಕಾರಣಿಗಳು ಹೆಚ್ಚಿನ ಒಟ್ಟು ಕೊಡುವುದು ಅತೀ ಮುಖ್ಯ . ಕನ್ನಡ ಉಳಿಸಿ, ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಬೈಲಹೊಂಗಲ ತಾಲೂಕು ಎಂಟನೇ ಕನ್ನಡ ಸಾಹಿತ್ಯ ಸಮೇಳನ ಉದ್ಘಾಟಿಸಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಬೈಲೂರ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಕನ್ನಡ ಮತ್ತು ಬಸವ ಎರಡು ಮೂರು ಅಕ್ಷರಗಳು ಇದ್ದು ಇದರ ಅರ್ಥ ಒಂದೇ ಮತ್ತು ಚೀನಾ ದೇಶದಲ್ಲಿ ದೇಶದ ತುಂಬಾ ಚೀನಿ ಭಾಷೆಯನ್ನು ಮಾತನಾಡುತ್ತಾರೆ. ಪ್ರಪಂಚದ ಎಲ್ಲ ದೇಶಗಳಲ್ಲಿ ಒಂದೇ ಭಾಷೆಯನ್ನು ಬಳಸುತ್ತಾರೆ, ಆದರೆ ಅನೇಕ ಭಾಷೆಗಳನ್ನು ಹೊಂದಿರುವ ದೇಶ ಭಾರತ ತನ್ನದೇ ಆದ ವೈಶಿಷ್ಟ ಹೊಂದಿದೆ, ಅದರಲ್ಲಿ ಕನ್ನಡ ಭಾಷೆ ಆ ಭಾಷೆಯನ್ನು 12 ಶತಮಾನದಲ್ಲಿ ಕನ್ನಡವನ್ನು ಬಲಿಷ್ಠಗೊಳಿಸಿದವರು ಅಣ್ಣ ಬಸವಣ್ಣನವರು. ಹೊರರಾಜ್ಯದ ತಮ್ಮ ಸಹಪಾಠಿಗಳಿಗೆ ಕನ್ನಡ ಕಳಿಸಿ ಕನ್ನಡದಲ್ಲಿ ವಚನ ಬರೆಸಿದವರು ಬಸವಣ್ಣನವರು. ಇಂತಹ ಕನ್ನಡ ಸಮ್ಮೇಳನಗಳು ಒಂದು ದಿನದ ಜಾತ್ರೆ ಆಗಬಾರದು, ಕನ್ನಡ ಭಾಷೆಗಾಗಿ ರಾಜ್ಯದ ಅನೇಕ ಮಠಗಳು ಹಿಂದಿನಿಂದಲೂ ಕಾರ್ಯ ನಿರ್ವಹಿಸುತ್ತಿದ್ದು,ಕರ್ನಾಟಕಕ್ಕೆ ದೇಶಕ್ಕೆ ಅನೇಕ ಜನರು ವಲಸೆ ಬಂದಿದ್ದಾರೆ. ಅವರನ್ನು ಆದರದಿಂದ ನಮ್ಮೊಂದಿಗೆ ಬದುಕು ಕೊಟ್ಟಿದ್ದೆವೆ. ಅವರು ಸಹಿತ ವ್ಯಾಪಾರ ಮಾಡಿ ಕನ್ನಡ ಕಲಿತಿದ್ದಾರೆ. ನೆರೆ ರಾಜ್ಯಗಳಾದ ತಮಿಳನಾಡು, ಕೇರಳದಲ್ಲಿ ಕ್ರೈಸ್ತರು, ಇಸ್ಲಾಮರು ಚರ್ಚ್ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಾಗ ತಮಿಳು, ಮಲೆಯಾಳಂ ಭಾಷೆ ಬಳಕೆ ಮಾಡುತ್ತಾರೆ. ಅದೇ ರೀತಿ ಕರ್ನಾಟಕದಲ್ಲಿ ಕ್ರೈಸ್ತರು ಹಾಗೂ ಮುಸ್ಲಿಂರು ತಮ್ಮ ಪ್ರಾರ್ಥನೆಯನ್ನು ಕನ್ನಡದಲ್ಲಿ ಮಾಡಬೇಕು. ಆಗ ಮಾತ್ರ ಕನ್ನಡ ಕನ್ನಡ ಭಾಷೆಗೆ ಪ್ರಾಮುಖ್ಯತೆ ಮತ್ತು ಜಾತಿಗಳಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದರು.
ಬೇರೆ ಭಾಷೆಗಳಿಗೆ ಚಿಕ್ಕಮ್ಮ, ದೊಡ್ಡಮ್ಮ ಎನ್ನಿ, ಕನ್ನಡ ತಾಯಿ ಭಾಷೆಗೆ ನಮ್ಮವ್ವ ಎನ್ನಿ ಅಂದರು.
ಮುಂದಿನ ದಿನಗಳಲ್ಲಿ ಬೈಲೂರ ಮಠದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲು ಆಯೋಜನೆ ಮಾಡಲು ಮನವಿ ಮಾಡಿದರು.
ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮುಖ್ಯ ಉದ್ದೇಶ ಕನ್ನಡ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನಡೆಸುತ್ತಿದ್ದು ಇಂದಿನ ಮಹಿಳೆಯರು ಧಾರಾವಾಹಿಗಳಿಂದ ದೂರ ಬರಬೇಕು, ಯುವ ಜನಾಂಗ ಸಾಮಾಜಿಕ ಜಾಲತಾಣದಿಂದ ಹೊರಬಂದು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ, ಒಂದು ವರ್ಷದಿಂದ ಮಾಡಬೇಕು ಎನ್ನುವ ಕಾರ್ಯಕ್ರಮ ಇಂದು ಮಹಾನ್ ಕವಿ ಡಾ. ಚಂದ್ರಶೇಖರ ಕಂಬಾರ ಅವರಿಂದ ಉದ್ಘಾಟನೆ ಆಗಿದ್ದು ಹೆಮ್ಮೆ ಆಗುತ್ತದೆ. ಈ ಕಾರ್ಯಕ್ರಮದ ಯಶಸ್ವಿಗೆ ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳಿಗೆ, ಬೈಲಹೊಂಗಲ ತಾಲೂಕ ಕನ್ನಡ ಸಾಹಿತ್ಯ ಪರಿಷತ ಸದಸ್ಯರಿಗೆ ನಮ್ಮ ಶ್ರೀಮತಿ ರೋಹಿಣಿ ಪಾಟೀಲ ಅವರಿಗೆ ಸಲ್ಲುತ್ತದೆ ಎಂದರು.
ಬೈಲಹೊಂಗಲ ಶಾಖಾ ಮೂರುಸಾವಿರ ಮಠದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ ಚಂದ್ರಶೇಖರ ಕಂಬಾರ ಬಂದು ಉದ್ಘಾಟನೆ ಮಾಡಿದ್ದು ಈ ಭಾಗದ ಪುಣ್ಯ, ಕನ್ನಡ ಬೆಳೆಯಲು ತಾಯಿ, ತಂದೆ, ಗುರು ಮೂರು ಜನರ ಶ್ರಮ ಮುಖ್ಯ ಬಾಲ್ಯದಲ್ಲಿ ತಾಯಿ ಲಾಲಿ ಹಾಡು, ತಂದೆಯ ಸಂಸ್ಕಾರ, ಗುರುವಿನ ಪಾಠದಿಂದ ಕನ್ನಡ ಬೆಳವಣಿಗೆ ಸಾಧ್ಯ ಎಂದರು.
ಸಾಹಿತಿ, ಸಮ್ಮೇಳನಾಧ್ಯ ಕೆ.ಎಸ್. ಕೌಜಲಗಿ ಮಾತನಾಡಿ ಬೈಲಹೊಂಗಲ ನಾಡು ಸ್ವಾತಂತ್ರ್ಯ ಹೋರಾಟಗಾರರ ನಾಡು, ಮೊದಲು ಸಂಪಗಾಂವ ಇದ್ದ ತಾಲೂಕು ನಂತರ ಬೈಲಹೊಂಗಲ ತಾಲೂಕು ಆಯಿತು, ನಂದರು, ಮೌರ್ಯರು, ಶತವಾಹನರು, ಚಾಲುಕ್ಯರು, ರಾಷ್ಟ್ರಕೂಟರು,ಬ್ರಿಟಿಷರ ದಾಳಿಗೆ ತುತ್ತಾದರೂ ಬೈಲಹೊಂಗಲ ನಾಡು, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಇನ್ನೂ ಅನೇಕರ ಸ್ವಾತಂತ್ರ್ಯ ಹೋರಾಟದ ನಾಡು, ನಾಗನೂರ ರುದ್ರಾಕ್ಷಿ ಮಠ, ಬೈಲಹೊಂಗಲ ಮುರುಸಾವಿರ ಮಠ ನೇಸರಗಿ ಮಲ್ಲಾಪುರ ಗಾಳೇಶ್ವರ ಮಠ ಸೇರಿದಂತೆ ಅನೇಕ ಮಠಗಳ ಬಿಡಾಗಿದ್ದು, ಪ್ರಾಚೀನ ಬೈಲಹೊಂಗಲದ ಕರಿಗುಡಿ, ನೇಸರಗಿ ಜೋಡಗುಡಿ, ವೀರಭದ್ರಶ್ವರ ದೇವಸ್ಥಾನ, ವಕ್ಕುಂದ ತ್ರಿಕೋಟೇಶ್ವರ ದೇವಸ್ಥಾನ ಹೆಸರುವಾಸಿ ಆಗಿವೆ. ಎಲ್ಲ ವಿಭಾಗ್ಯದಲ್ಲಿ ಬೈಲಹೊಂಗಲ ತಾಲೂಕು ಎಲ್ಲ ವಿಭಾಗಳಲ್ಲಿ ಮುಂದಿದ್ದು, ಬೆಳಗಾವಿ ಜಿಲ್ಲಾ ವಿಭಜನೆ ಆದರೆ ಬೈಲಹೊಂಗಲಕ್ಕೆ ಜಿಲ್ಲಾ ಸ್ಥಾನಮಾನ ಸಿಗಬೇಕು , ಕೃಷಿ ಅವಲಂಬಿತ ಈ ಭಾಗದ ರೈತರಿಗೆ ಉತ್ತೇಜನ ಸಿಗಲಿ,ಅದಕ್ಕಾಗಿಯೇ ಇದು ಗಂಡು ಮೆಟ್ಟಿನ ನಾಡು, ಕನ್ನಡ ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡಲಿ, ಪಾಲಕರು ಮಕ್ಕಳ ಶಿಕ್ಷಣ ಕನ್ನಡದಲ್ಲಿ ನೀಡಲು ಮುಂದೆ ಬರಲಿ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷೆ ರೋಹಿಣಿ ಪಾಟೀಲ ಮಾತನಾಡಿ, ಈ ಸುಂದರ ಕನ್ನಡ ತಾಯಿ ಭುವನೇಶ್ವರಿ ತಾಯಿ ಸಾಹಿತ್ಯ ಸಮ್ಮೇಳನ ಇಷ್ಟೊಂದು ಆಡಂಬರದಿಂದ ನಡೆಯಲು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಎಲ್ಲ ಅಧಿಕಾರಿಗಳಿಗೆ, ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ ಅವರ ಕನ್ನಡ ಹಾಗೂ ಶಿಕ್ಷಣ ಪ್ರೇಮಕ್ಕೆ ಒಂದು ವಾರದಲ್ಲಿ 6 ಕಿ ಮೀ ಅಂತರದಲ್ಲಿ ಎರಡು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವದೇ ಕಾರಣ ಎಂದರು.
ನೇಗಿನಹಾಳ ಸಿದ್ದಾರೂಢ ಮಠದ ಶ್ರೀ ಅದ್ವೈತಾನಂದ ಶ್ರೀಗಳು,ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಕಾಶೀನಾಥ ಇನಾಮದಾರ, ಡಾ. ಶಾಂತಿನಾಥ ದಿಬ್ಬದ, ತಹಶೀಲ್ದಾರ ಹಣಮಂತ ಶಿರಹಟ್ಟಿ, ದೂರದರ್ಶನ ಕಲಾವಿದ ಸಿ ಕೆ ಮೆಕ್ಕೇದ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಮಾಜಿ ಕಸಾಪ ಅಧ್ಯಕ್ಷ ಮೋಹನ ಪಾಟೀಲ, ಎಸ್. ಡಿ.ಗಂಗಣ್ಣವರ, ಮಹರುದ್ರಪ್ಪ ನಂದೇನ್ನವರ, ಗ್ರಾ ಪಂ ಅಧ್ಯಕ್ಷೆ ಮಹಾದೇವಿ ಕೋಟಗಿ, ಮಡಿವಾಳಪ್ಪ ಕುಲ್ಲೊಳ್ಳಿ,ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್. ಸಿದ್ದಣ್ಣವರ, ಬೈಲಹೊಂಗಲ ತಾಲೂಕ ಕಸಾಪ ಅಧ್ಯಕ್ಷ ಎನ್ ಆರ್ ಠಕ್ಕಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ, ಉಪಾಧ್ಯಕ್ಷ ದೀಪಾ ಬೈಲವಾಡ, ಸಂತೋಷ ಹಡಪದ, ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು,ಪದಾಧಿಕಾರಿಗಳು, ನೇಗಿನಹಾಳ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು, ಬೈಲಹೊಂಗಲ ತಾಲೂಕಾ ಶಿಕ್ಷಕರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಸಂತೋಷ ಪಾಟೀಲ, ರಾಜು ಹಕ್ಕಿ ನೆರವೇರಿಸಿದರು. ಧ್ವಜಾರೋಹಣ, ಮೆರವಣಿಗೆ, ಉದ್ಘಾಟನೆ, ವಿಚಾರಗೋಷ್ಠಿ, ಕವಿಗೋಷ್ಠಿ, ಸಾಧಕರ ಸನ್ಮಾನ, ಸಮಾರೋಪ ಸಮಾರಂಭ ನೆರವೇರಿತು.
ಕನ್ನಡ ಬೆಳವಣಿಗೆಗೆ ರಾಜಕಾರಣಿಗಳು ಒತ್ತು ನೀಡಬೇಕು : ಡಾ. ಚಂದ್ರಶೇಖರ ಕಂಬಾರ
