ಬೆಳಗಾವಿ,: ಹವಾಮಾನದಲ್ಲಿ ಉಂಟಾದ ಭಾರೀ ವೈಪರಿತ್ಯದಿಂದ ಡಿಸೆಂಬರ ತಿಂಗಳಲ್ಲಿ ಬೀಸುತ್ತಿರುವಚಳಿಗಾಳಿಗೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದರಂತೆ ವಿಮಾನಗಳ ಹಾರಾಟದಲ್ಲಿಯೂ ಸಾಕಷ್ಟು ವ್ಯತ್ಯಯ ಉಂಟಾಗುತ್ತಿದೆ. ಇಂದು ದೆಹಲಿಯಿಂದ ಬೆಳಗಾವಿಗೆ ಆಗಮಿಸುತ್ತಿದ್ದ ವಿಮಾನವು ಹವಾಮಾನ ವೈಪರಿತ್ಯದಿಂದಾಗಿ ಹಾರಾಟ ನಡೆಸದೇ ತೊಂದರೆಗೆ ಸಿಲುಕಿಕೊಂಡಿತ್ತು. ಅಲ್ಲದೇ ಅದರಲ್ಲಿದ್ದ ರಾಜ್ಯದ 21 ಶಾಸಕರು ಸಚಿವರು ಇಂಡಿಗೋ ವಿಮಾನದಲ್ಲಿಯೇ ಸಿಲುಕೊಂಡಿದ್ದರು.

ದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಮತಗಳ್ಳತನ ಸಮಾವೇಶಕ್ಕೆ ರಾಜ್ಯದ ಮಂತ್ರಿಗಳು, ಕಾಂಗ್ರಸ್‌ ಶಾಸಕರು ದೆಹಲಿಗೆ ತೆರಳಿದ್ದರು. ಹಿರಿಯ ಶಾಸಕ ಹಾಗೂ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವದಕ್ಕಾಗಿ ಬೆಳಗಾವಿಗೆ ಆಗಮಿಸುವ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಶಾಸಕರ ವಿಮಾನ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ವಿಮಾನದ ಒಳಗಡೆ ಕುಳಿತುಕೊಂಡ ಬಳಿಕ ದಟ್ಟವಾದ ಹೊಗೆಯಿಂದಾಗಿ ವಿಮಾನ ಟೇಕಾಫ್‌ ಆಗಿಲ್ಲ.

ಸುಮಾರು 4 ಗಂಟೆಯಿಂದ ಶಾಸಕರು ವಿಮಾನದಲ್ಲೇ ಕುಳಿತ್ತಿದ್ದರು. ನಂತರ 10.30ಕ್ಕೆ ವಿಮಾಣ ಟೇಕ ಆಫ್‌ ಆಗಿ,ಮಾದ್ಯಾಹ್ನ 12.45ಕ್ಕೆ ಬೆಳಗಾವಿಗೆ ಆಗಮಿಸಿತು.