ಬೆಳಗಾವಿ: ಹಲವು ವರ್ಷಗಳಿಂದ ಸಂಘರ್ಷಕ್ಕೆ ಕಾರಣವಾಗಿದ್ದ ನಗರದ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆಯ ಟ್ರೇಡ್ ಲೈಸೆನ್ಸ್ ಅನ್ನು ರದ್ದುಗೊಳಿಸಿ ರಾಜ್ಯ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಸೋಮವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.
ಸುಮಾರು 10 ವರ್ಷಗಳಿಂದ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಹಾಗೂ ಎಪಿಎಂಸಿ ಮಾರುಕಟ್ಟೆ ವ್ಯಾಪಾರಸ್ಥರ ಮಧ್ಯೆ ಕಾನೂನು ಸಂಘರ್ಷ ನಡೆದಿತ್ತು. ಈಗ ರಾಜ್ಯ ಸರ್ಕಾರವೇ ಜೈ ಕಿಸಾನ್ ತರಕಾರಿ ಮಾರುಕಟ್ಟೆಯ ಲೈಸೆನ್ಸ್ ರದ್ದು ಪಡಿಸಿದೆ.
ಜೈ ಕಿಸಾನ್ ಮಾರುಕಟ್ಟೆಯ ಹಲವು ನ್ಯೂನ್ಯತೆಗಳನ್ನು ಎತ್ತಿ ಹಿಡಿದ ಕೃಷಿ ಮಾರಾಟ ಇಲಾಖೆ ನಿರ್ದೇಶಕರು, ಕೂಡಲೇ ಬೆಳಗಾವಿ ನಗರದಲ್ಲಿ ನಡೆಯುತ್ತಿದ್ದ ಮಾರುಕಟ್ಟೆಯ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಿ ಆದೇಶಿಸಿದ್ದಾರೆ. ವಾರದ ಹಿಂದೆಯಷ್ಟೇ ಬೆಳಗಾವಿ ಅಭಿವೃದ್ಧಿ ಪ್ರಾ ಧಿಕಾರ(ಬುಡಾ) ಈ ಮಾರುಕಟ್ಟೆ ವಿರುದ್ಧ ಆದೇಶ ನೀಡಿತ್ತು.
ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆಯ ವರ್ತಕರು ರೈತರಿಂದ ಕಮಿಷನ್ ಪಡೆಯುತ್ತಿರುವುದು ಕಂಡು ಬಂದಿದೆ. ಆವಕ/ಜಾವಕವಾಗುವ ಕೃಷಿ ಉತ್ಪನ್ನಗಳ ಬಗ್ಗೆಯಾವುದೇ ದಾಖಲಾತಿಗಳನ್ನು ನಿರ್ವಹಿಸಿರುವುದಿಲ್ಲ. ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುವ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ಅಂಕಿ ಅಂಶಗಳನ್ನು ವರ್ತಕರು/ಸಂಘದವರು ನಿರ್ವಹಿಸಿಲ್ಲ ಕೃಷಿ ಉತ್ಪನ್ನಗಳ ತೂಕಕ್ಕಾಗಿ ಪ್ರತಿ ಅಂಗಡಿಯಲ್ಲಿ ವಿದ್ಯುನ್ಮಾನ ತೂಕದ ಯಂತ್ರಗಳನ್ನು ಆಳವಡಿಸಿದ್ದು, ಆದರೆ ಮಾರುಕಟ್ಟೆ ಪ್ರಾಂಗಣದಲ್ಲಿ ಬೃಹತ್ ತೂಕದ ಯಂತ್ರ ಅಳವಡಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಮಾರುಕಟ್ಟೆಯಲ್ಲಿ ಪರಸ್ಪರ ಒಪ್ಪಂದದ ಮೂಲಕ ಕೃಷಿ ಉತ್ಪನ್ನಗಳ ವಿಲೇವಾರಿಯಾಗು ತಿದ್ದು, ಮಾರಾಟ ಪದ್ಧತಿಯಲ್ಲಿ ಯಾವುದೇ ಪಾರದರ್ಶಕತೆ ಅಳವಡಿಸಿಕೊಂಡಿಲ್ಲ. ಮಾರುಕಟ್ಟೆ ಪ್ರಾಂಗಣದಲ್ಲಿ ಕೃಷಿ ಉತ್ಪನ್ನಗಳ ದರಗಳ ಬೋರ್ಡ್ ಪ್ರದರ್ಶಿಸಿಲ್ಲ. ರೈತರು ತರುವಂತಹ ತರಕಾರಿ ಉತ್ಪನ್ನಗಳಿಗೆ ಪರಸ್ಪರ ಒಪ್ಪಂದ ಮೂಲಕ ದರನಿಗದಿಯಾಗುತ್ತದೆ. ಇದನ್ನು ಮಾರುಕಟ್ಟೆಯಲ್ಲಿ ಕಂಪನಿಯು ದರವೆಂದು ಕರೆಯಲಾಗುತ್ತಿದ್ದು, ಇದರ ಬಗ್ಗೆ ರೈತರನ್ನು ವಿಚಾರಿಸಿದಾಗ ಕಂಪನಿ ಮೊದಲೇ ದರ ನಿಗದಿಪಡಿಸಿದ್ದು, ಆ ದರಗಳಿಗೆ ತರಕಾರಿಗಳನ್ನು ಮಾರುತ್ತಿರುವುದಾಗಿ ಪರಿಶೀಲನೆ
ವೇಳೆ ತಿಳಿಸಿದ್ದಾರೆ ಎಂದಿದ್ದಾರೆ ಈ ಮಾರುಕಟ್ಟೆಯಲ್ಲಿ ವ್ಯವಹಾರ
ಮರಾಠಿ/ಹಿಂದಿ ಭಾಷೆಯಲ್ಲಿ ನಡೆಯುತ್ತಿದ್ದು, ಸ್ಥಳೀಯ ಕನ್ನಡ ಬರುವ ರೈತರಿಗೆ ತಮ್ಮ ಮಾಹಿತಿ ದೊರೆಯುವುದಿಲ್ಲ. ಮಾರುಕಟ್ಟೆ ಉತ್ಪನ್ನಗಳಿಗೆ ನಿಗದಿಯಾದ ದರಗಳ ಬಗ್ಗೆ ನಿಖರ ಪ್ರಾಂಗಣದಲ್ಲಿ ರೈತರ ಉತ್ಪನ್ನಗಳನ್ನು ಶೇಖರಿಸಿಡಲು ಇಲ್ಲದಿರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಅಂದಿನ ದಿನ ನಿಗದಿಯಾದ ದರಕ್ಕೆ ಮಾರಾಟ ಮಾಡುವ ಅನಿವಾರ್ಯತೆ ಇದೆ. ಮಾರುಕಟ್ಟೆ ಪ್ರಾಂಗಣದಲ್ಲಿ ರೈತರಿಗೆ ಅನುಕೂಲವಾಗಲು ರಾಷ್ಟ್ರೀಕೃತ / ಶೆಡ್ಯೂಲ್ ಬ್ಯಾಂಕ್‌ಗಳು ಇಲ್ಲ ರೈತರಿಗೆ ತಂಗಲು ರೈತಭವನ ಇದ್ದರೂ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ದೂರುದಾರರು ವಿಚಾರಣೆ ಸಂದರ್ಭದಲ್ಲಿ ಮಾರುಕಟ್ಟೆ ಕ್ಷೇತ್ರದಲ್ಲಿ ರೈತರ ಹೊಲಗಳಲ್ಲಿ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದು, ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು