ಬೆಳಗಾವಿ,: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಮೀಪಿಸುತ್ತಿದ್ದಂತೆ ಅಖಾಡ ರಣಾಂಗಣವಾಗಿ ಮಾರ್ಪಡುತ್ತಿದೆ. ಪಿಕೆಪಿಎಸ್ ನ ಕಾರ್ಯದರ್ಶಿಯನ್ನು ಅಪಹರಣ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಕಾರ್ಯಕರ್ತರು ಗಲಾಟೆ ಆರಂಭಿಸಿದ್ದು, ಕಿತ್ತೂರಿನ ಡಿಸಿಸಿ ಬ್ಯಾಂಕ್ ಶಾಖೆ ಎದುರು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆಯಿರುವ ಕಾರಣಕ್ಕೆ ಚುನಾವಣೆ ಠರಾವು ಹೊರಡಿಸಬೇಕಿದ್ದ ಡಿಸಿಸಿ ಬ್ಯಾಂಕ್ ಸೆಕ್ರೇಟರಿ ಭೀಮಪ್ಪ ಅವರನ್ನು ಕಾಂಗ್ರೆಸ್ ನವರು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಕರೆದೊಯ್ದಿದ್ದಾರೆ.
ಕಿತ್ತೂರಿನ ಬ್ಯಾಂಕ್ ಶಾಖೆ ಎದುರೇ ಬಿಜೆಪಿ ಸದಸ್ಯರು ಹಾಗೂ ಕಾರ್ಯಕರ್ತರು ಕಾರು ಅಡ್ಡಗಟ್ಟಿ ಅಪಹರಣ ಯತ್ನ ವಿಫಲಗೊಳಿಸಿದ್ದಾಗಿ ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ. ಪೊಲೀಸರ ಸಮ್ಮುದಲ್ಲಿ ಡಿಸಿಸಿ ಬ್ಯಾಂಕ್ ಎದುರು ಬಿಜೆಪಿ ಕಾರ್ಯಕರ್ತರು ಕಾರಿನ ಬಾಗಿಲು ತೆರೆದು ಸೆಕ್ರೇಟರಿ ಭೀಮಪ್ಪ ಅವರನ್ನು ಕಾರಿನಿಂದ ಇಳಿಸಿ ಹೊರತಂದಿದ್ದಾರೆ.
ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ಮಾತಿನ ಚಕಮಕಿ ತಾರಕ್ಕೇರಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯದರ್ಶಿ ಅಪಹರಣ
