ಬೆಳಗಾವಿ: ಕಾನೂನುಗಳು ಬೀಗಿ ಆದ್ರು ಕೆಲ ಅಧಿಕಾರಿಗಳ ನಿರ್ಲಕ್ಷ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಈ ಸ್ಟೊರಿ. ಬಾಲಕಿಯರ ರಕ್ಷಣೆ ಕೇಂದ್ರಕ್ಕೆ ನುಗ್ಗಿದ್ದ ಓರ್ವ ಯುವಕ ಚಾಕು ತೋರಿಸಿ ಬಾಲಕಿಯನ್ನು ಅಪಹರಿಸಿ ಹೋಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ 13 ವರ್ಷದ ಬಾಲಕಿಯನ್ನು ಯುವಕ ಓರ್ವ ಬಾಲ್ಯ ವಿವಾಹವಾಗಿದ್ದಾನೆ.‌ ಬಾಲಕಿ 13 ನೇ ವಯಸ್ಸಿನಲ್ಲೇ ಗರ್ಭಿಣ ಆಗಿರುವ ಕಾರಣ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿನ ಬರುವ ಜಿಲ್ಲಾ ಮಕ್ಕಳ ಘಟಕದ ಸೃಷ್ಟಿ ಸಂಸ್ಥೆಯ ತಂಗುದಾಣದಲ್ಲಿ ಬಾಲಕಿಯನ್ನು ಇರಿಸಲಾಗಿತ್ತು. ಆದ್ರೆ ಆಕೆಯ ಗಂಡ ಚಿಕ್ಕಪ್ಪ ಎಂದು ಹೇಳಿಕೊಂಡು ಜುಲೈ 31 ರಂದು ರಕ್ಷಣಾ ಕೇಂದ್ರ ಅಧಿಕಾರಿಗಳಿಗೆ ಚಾಕು ತೋರಿಸಿ ಬಾಲಕಿಯನ್ನು ಅಪಹರಿಸಿ ಹೋಗಿದ್ದಾನೆ. ಆದರೆ ಈ ಸೃಷ್ಠಿ ಕೇಂದ್ರದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕಿಯ ಅಪಹರಣ ಆಗಿದೆ. ಅಪಹರಣವಾದರೂ ತಡ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ನೀಡಿಲ್ಲ.‌ ಜೊತೆಗೆ ಈ ಕೇಂದ್ರದಲ್ಲಿ ಯಾವುದೇ ಭದ್ರೆತೆಗೆ ಇಲ್ಲದಿರುವೇ ಈ ಘಟನೆಗೆ ಕಾರಣವಾಗಿದೆ.‌
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಂ ಎನ್ ಚೇತನ ಕುಮಾರ
ಬಾಲಕಿಯ ಅಪಹರಣ ಜೂಲೈ ,31 ರ ಸಂಜೆ 6 ಗಂಟೆಗೆ ಆಗಿದ್ದು, ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿ ಜೈಲಿಗೆ ಕಳುಹಿಸಿದರೆ, ಬಾಲಕಿಯನ್ನು ರಕ್ಷಿಸಿ ಮತ್ತೆ ತಂಗು ದಾಣಕ್ಕೆ ಕಳುಹಿಸಲಾಗಿದೆ.‌
ಪೊಲೀಸ್ ಕಮಿಷನರ್ ಭೂಷಣ್ ಗುಲಾಬರಾವ್ ಬೋರಸೆ ಅವರ
ಮಾಹಿತಿ ಪ್ರಕಾರ ಈ ಹಿಂದೆಯೂ ಈ ಸೃಷ್ಠಿ ಕೇಂದ್ರದ ಅವಸ್ಥೆ ಬಗ್ಗೆ ಗಮನ ಹರಿಸಿಕೊಳ್ಳಲು ಸ್ಥಳೀಯ ಪೊಲೀಸರು ಸೂಚನೆ ನೀಡುತ್ತಾ ಬಂದಿದ್ದಾರೆ.‌ ಆದರೆ ಯಾವುದಕ್ಕೂ ಕ್ಯಾರೆ ಅನ್ನದೆ ಯಾವುದೇ ಸೂಕ್ತ ಭದ್ರತೆ ಮಾಡಿಕೊಂಡಿಲ್ಲ. ಹಾಗಾಗಿ ಮುಂದೆ ಆದರೂ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.