ಬೆಳಗಾವಿ,: ಇತ್ತೀಚಿನ ದಿನಗಳಲ್ಲಿ ಆರೋಗ್ಯಯುತವಾಗಿ ಕಂಡರೂ ಕೂಡ ಯುವಕರಲ್ಲಿ ಹೃದ್ರೋಗ ಸಮಸ್ಯೆ ತೀವ್ರವಾಗಿ ಕಂಡು ಬರುತ್ತಿದೆ. ಅದರಲ್ಲಿಯೂ ಗುಣಲಕ್ಷಣಗಳಿಲ್ಲದೆ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದುತ್ತಿರುವದು ಅತ್ಯಂತ ಅಪಾಯಕಾರಿ. ರಕ್ತದೊತ್ತಡ ಮತ್ತು ಮಧುಮೇಹ ಹೊಂದಿದವರು ಮುಖ್ಯವಾಗಿ ಆರೋಗ್ಯ ತಪಾಸಣೆಯನ್ನು ಮೇಲಿಂದ ಮೇಲೆ ಮಾಡಿಸಿಕೊಳ್ಳಬೇಕು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಹೃದಯಾಘಾತದಿಂದ ದೂರ ಉಳಿಯಬಹುದು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹೃದ್ರೋಗ ತಜ್ಞವೈದ್ಯರಾದ ಡಾ. ಸುರೇಶ ಪಟ್ಟೇದ ಅವರು ಸಲಹೆ ನೀಡುತ್ತಾರೆ.
ಶರೀರದ ಅತೀ ಮುಖ್ಯ ಅಂಗವಾದ ಹೃದಯದ ಕಾಳಜಿವಹಿಸುವದು ಯುವಕರ ಪ್ರಪ್ರಥಮ ಆದ್ಯತೆ. ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡ ಮತ್ತು ಹೃದಯಕ್ಕೆ ರಕ್ತ ಸರಬರಾಜು ಮಾಡುವ ನಾಳಗಳಲ್ಲಿ ಕೊಬ್ಬಿನಾಂಶ ಸಂಗ್ರಹವಾಗುವುದರಿಂದಹೃದಯಾಘಾತ ಸಂಭವಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಮಧುಮೇಹವೂ ಒಂದು.
ಸಿಗರೇಟ ಸೇವನೆ ಮತ್ತು ರಕ್ತದಲ್ಲಿ ಅಧಿಕ ಕೊಬ್ಬಿನಾಂಶ, ಕುಟುಂಬದಲ್ಲಿ ಹೃದಯ ಖಾಯಿಲೆ, ಬೊಜ್ಜು, ಅತೀ ಐಷಾರಾಮಿ ಜೀವನ ಶೈಲಿ ಮತ್ತು ಮಾನಸಿಕ ಒತ್ತಡ, ಮಧುಮೇಹಿಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿ ಅಧಿಕ ಕೊಬ್ಬಿನಾಂಶ ಸಾಮಾನ್ಯವಾಗಿ ಕಂಡುಬರುತ್ತದೆ. ಮಧುಮೇಹದಂತೆ ರಕ್ತದೊತ್ತಡ ಮತ್ತು ಹೃದ್ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಈ ಮೊದಲೂ ಕೂಡ ಹೃದಯಾಘಾತ ಸಂಬವಿಸುತ್ತಿತ್ತು. ಆದರೆ ಅಂಕಿ ಸಂಖ್ಯೆ ದಾಖಲೆಗಳನ್ನಿಡುವ ವ್ಯವಸ್ಥೆ ಇರಲಿಲ್ಲ. ಈಗೀಗ ಮಾದ್ಯಮಬಪ್ರಬಲವಾಗಿದ್ದು, ಎಲ್ಲಿಯೇ ಯಾವುದೇ ಘಟನೆಗಳು ನಡೆದರೂ ಕೂಡ ಕ್ಷಣದಾರ್ಧದಲ್ಲಿ ಮಾಹಿತಿ ಲಭಿಸುತ್ತಿರುವದರಿಂದ ನಮಗೆ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ ಎಂಬುದನ್ನು ಅನೇಕ ಅಧ್ಯಯನಗಳು ತಿಳಿಸಿವೆ. ಆರೋಗ್ಯವಂತ ಹೃದಯ ಹೊಂದಲು ಕೆಲವು ಮಾರ್ಗದರ್ಶನಗಳನ್ನು ಅನುಸರಿಸಿದರೆ ಸಂಪೂರ್ಣ ಆರೋಗ್ಯಕರ ಜೀವನ ನಡೆಸಬಹುದು.
ರಕ್ತದೊತ್ತಡ
ರಕ್ತ ಪರಿಚಲನೆಯಲ್ಲಿ ರಕ್ತವು ರಕ್ತನಾಳದ ಗೋಡೆಗೆ ಬಲವಾಗಿ ಒತ್ತುವದಾಗಿದೆ. ಪ್ರತಿ ಸಲ ಹೃದಯ ಬಡಿತದಿಂದ ಉಂಟಾಗುವ ರಕ್ತದೊತ್ತಡವನ್ನು ಸಿಸ್ಟೋಲಿಕ್ ಒತ್ತಡ ಎನ್ನುತ್ತಾರೆ. ಹೃದಯ ಬಡಿತದ ಮದ್ಯ ಹೃದಯ ವಿಶ್ರಮಿಸವಾಗ ರಕ್ತದ ಒತ್ತಡ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ರಕ್ತದೊತ್ತಡವು 120/80 ಆಗಿರುತ್ತದೆ (ಹೆಚ್ಚಿನ ಸಂಖ್ಯೆ ಹೊಂದಿರುವುದೇ ಸಿಸ್ಟೋಲಿಕ್ ಒತ್ತಡ) ರಕ್ತದೊತ್ತಡ ಮಾಪನ 140/90 ಕ್ಕಿಂತ ಅಧಿಕ ಇರುವುದು ಅಧಿಕ ರಕ್ತದೊತ್ತಡವನ್ನು ಸೂಚಿಸುತ್ತದೆ.
ಲಕ್ಷಣಗಳು
ತಲೆ ನೋವು, ತಲೆ ತಿರುಗುವುದು, ಆಯಾಸ, ಮುಗಿನಿಂದ ರಕ್ತಸ್ರಾವ ಅಧಿಕ ರಕ್ತದೊತ್ತಡ ಲಕ್ಷಣಗಳು. ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಹೃದಯಾಘಾತ ಸಂಭವಿಸಬಹುದು. ಮಧುಮೇಹಿಗಳು ಶೇ. 80ರಷ್ಟು ಬೊಜ್ಜು, ಅಧಿಕ ರಕ್ತದೊತ್ತಡ ಹೊಂದಿದವರಾಗಿದ್ದಾರೆ. ಮಧುಮೇಹ ಮತ್ತು ರಕ್ತದೊತ್ತಡ ಜೊತೆಯಾಗಿರುತ್ತವೆ.
ದೊಡ್ಡ ರಕ್ತನಾಳಗಳಲ್ಲಿ ಕೊಬ್ಬಿನಾಂಶ ಶೇಖರಣೆಗೊಂಡು ಹೃದಯಕ್ಕೆ ಅವಶ್ಯಕವಿದ್ದ ಪ್ರಮಾಣದಲ್ಲಿ ರಕ್ತ ಸರಬರಾಜು ಮಾಡಲು ಅಡ್ಡಿಮಾಡುವುದರಿಂದ ಹೃದಯಕ್ಕೆ ತೊಂದರೆಯುಂಟಾಗುತ್ತದೆ.ಇದು ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಹೃದ್ರೋಗದ ಲಕ್ಷಣಗಳು:
ಮಾನಸಿಕ ಒತ್ತಡ, ಶಾರೀರಿಕ ಶ್ರಮ, ಅತೀಯಾದ ಊಟ, ಆತೀ ಹೆಚ್ಚು ಅಥವಾ ಕಡಿಮೆ ತಾಪಮಾನವಿದ್ದ ಸಮಯದಲ್ಲಿ ಅನುಭವಕ್ಕೆ ಬರುತ್ತದೆ. ಉಸಿರಾಟ ತೊಂದರೆ, ಪಾದದ ಕೀಲುಗಳಲ್ಲಿ ಬಾವು, ಶರೀರದಲ್ಲಿ ರಕ್ತ ಪರಿಚಲನೆ ಸರಿಯಾಗಿಲ್ಲದಿರುವುದರ ಲಕ್ಷಣಗಳು. ಮಧುಮೇಹ ಹೊಂದಿದ ಜನರಲ್ಲಿ ಹಲವಾರು ಅಂಶಗಳು ಹೃದಯ ರೋಗಕ್ಕೆ ಕಾರಣವಾಗುತ್ತವೆ. ಸಕ್ಕರೆ ಖಾಯಿಲೆ ನಿಯಂತ್ರಣದಲ್ಲಿಲ್ಲದಿದ್ದರೆ ಹೃದಯ ರಕ್ತನಾಳಗಳು ಅಪಾಯಕ್ಕೆ ಸಿಲಕುತ್ತವೆ. ಮಧುಮೇಹ ರೋಗಿಗಳು ರಕ್ತದಲ್ಲಿ ಅಧಿಕ ಕೊಬ್ಬಿನಾಂಶ ಹೊಂದಿರುತ್ತಾರೆ.
ನಿಯಮಿತ ತಪಾಸಣೆ
ಇತರೆ ರೋಗಗಳಂತೆ ಹೃದಯ ರೋಗ ಕೂಡ ಬೇಗನೆ ಪತ್ತೆ ಹೆಚ್ಚಿದರೇ ಚಿಕಿತ್ಸೆ ಅತೀ ಸುಲಭದಲ್ಲಿ ಆಗುತ್ತದೆ. ವೈದ್ಯರು ನಿಮ್ಮ ರಕ್ತದೊತ್ತಡ, ರಕ್ತದಲ್ಲಿಯ ಕೊಬ್ಬಿನಾಂಶದ ಪ್ರಮಾಣ ಪರೀಕ್ಷಿಸುತ್ತಾರೆ. ಇಸಿಜಿ, ಟಿಎಂಟಿ ಹಾಗೂ ಇಕೋಕಾರ್ಡಿಯೋಗ್ರಾಫಿ ತಪಾಸಣೆ ಮಾಡಲಾಗುತ್ತದೆ.
- ತೂಕ ಕಡಿಮೆಗೊಳಿಸುವುದು: * ವ್ಯಾಯಾಮ: ವ್ಯಾಯಾಮವನ್ನು (ನಡೆದಾಡುವುದು, ಸೈಕಲ್ ಹೊಡೆಯುವುದು, ಈಜುವುದು ಮುಂತಾದವುಗಳು) ನಿಮ್ಮ ಜೀವನ ಕ್ರಮದ ಒಂದು ಭಾಗವನ್ನಾಗಿಸಿಕೊಳ್ಳಿ. ಯಾವುದೇ ವ್ಯಾಯಾಮ ಕ್ರಮ ಪ್ರಾರಂಭಿಸುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಿ.
ಆಹಾರ ಕ್ರಮ: ಅಡುಗೆಯಲ್ಲಿ ಉಪ್ಪಿನಂಶ ಕಡಿಮೆಗೊಳಿಸಿ. ಕೊಬ್ಬಿನಾಂಶ ತುಂಬಿರುವ ಪದಾರ್ಥಗಳನ್ನು ತ್ಯಜಿಸಿ. ಮದ್ಯಪಾನ ಹೃದಯ ಸಂಬಂಧಿ ಔಷಧಗಳೊಂದಿಗೆ ತದ್ಧವಿರುದ್ಧವಾಗಿ ಪ್ರತಿಕ್ರಿಯಿಸಿ ರಕ್ತದೊತ್ತಡ ಕುಸಿಯುತ್ತದೆ. ಅತೀಯಾದ ಮದ್ಯಪಾನ ರಕ್ತದೊತ್ತಡವನ್ನು ಉಲ್ಬಣಗೊಳಿಸುತ್ತದೆ. ಮದ್ಯ ಸೇವನೆ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಆಗಾಧ ಪರಿಣಾಮ ಬೀರುತ್ತದೆ.
ಹೃದಯ ಕಾಳಜಿ:
ಮಧುಮೇಹ ರೋಗ ನಿಯಂತ್ರಣದAತೆ ಹೃದಯದ ಬಗ್ಗೆ ಕಾಳಜಿವಹಿಸಿ. ಸರಿಯಾದ ಆಹಾರ ಕ್ರಮ, ನಿಯಮಿತ ವ್ಯಾಯಾಮ ಮತ್ತು ಔಷಧ ಸೇವನೆ ಎಲ್ಲವೂ ನಿಮ್ಮ ನಿಯಂತ್ರಣದಲ್ಲಿಡಿ. ಇದರಿಂದ ಮಧುಮೇಹ ಮತ್ತು ಹೃದ್ರೋಗದಿಂದ ಬರಬಹುದಾದ ತೊಂದರೆಗಳಿAದ ಮುಕ್ತಿ ಹೊಂದಿ ಆರೋಗ್ಯಯುತ ಜೀವನ ಸಾಗಿಸಬಹುದಾಗಿದೆ.
ಬಸವರಾಜ ಸೊಂಟನವರ
ಜನಸಂಪರ್ಕಾಧಿಕಾರಿಗಳ