ಬೆಳಗಾವಿ: ಕಬ್ಬಿನ ಅದಿರು ತೆಗೆದುಕೊಂಡು ಹೋಗುತ್ತಿದ್ದ ರೈಲಿನ ಬೋಗಿಗಳು ಪಲ್ಟಿಯಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಗದ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ದುರಸ್ತಿ ಕಾರ್ಯ ಮುಗಿದ ಬಳಿಕ ರೈಲು ಸಂಚಾರ ಆರಂಭ ಎಂದು ರೈಲ್ವೆ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.
ಮಿರಾಜ್‍ದಿಂದ ಬರುತ್ತಿದ್ದ ಚಾಲುಕ್ಯ ಶರಾವತಿ ಎಕ್ಸ್ ಪ್ರೆಸ್, ಎಲ್ ಟಿಟಿ ದಾದರ್, ಅಜ್ಮೇರ್ ಎಕ್ಸ್‌ಪ್ರೆಸ್‌ ಮಾರ್ಗ ಮಧ್ಯದಲ್ಲಿಯೇ ನೀಲುಗಡೆ ಮಾಡಲಾಗಿದೆ.‌
ಬೆಳಗಾವಿಯಿಂದ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್, ಬೆಂಗಳೂರು ಜೋದ್ಪುರ್ ಎಕ್ಸ್ ಪ್ರೆಸ್, ಬೆಂಗಳೂರಿಂದ ಭಗತ್ ಕೋಟಿ, ಕ್ಯಾಸಲ್ ರಾಕ್- ಮಿರಜ್ ಪ್ಯಾಸೆಂಜರ್, ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.