ಬೆಳಗಾವಿ: ಓರ್ವ ವ್ಯಕ್ತಿ ಉತ್ತಮ ಜೀವನೋಪಾಯ ಕಂಡುಕೊಳ್ಳುವುದರ ಜೊತೆಗೆ ಲಿಂಗಾಯತ ಸಮುದಾಯದ ಅಸಹಾಯಕರನ್ನು ಮೇಲೆತ್ತುವ ಕಾರ್ಯದೊಂದಿಗೆ ಬಸವಣ್ಣವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕೆಂದು
ಅಶೋಕ ಐರನ್ ವರ್ಕ್ಸ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಹುಂಬರವಾಡಿ ಅವರು ಹೇಳಿದರು.
ಬೆಳಗಾವಿ ನಗರದ ಲಿಂಗಾಯತ ಬಿಸಿನೆಸ್ ಫೋರಂ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ ಅವರು ಸ್ಪರ್ಧಾತ್ಮಕ ವ್ಯಾಪಾರ ಜಗತ್ತಿನಲ್ಲಿ ಹೊಸ ಆಲೋಚನೆಗಳಿಂದ ಮಾತ್ರ ‘ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷ ಕಿರಣ ಅಗಡಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ಲಿಂಗಾಯತ ಬಿಸಿನೆಸ್ ಪೋರಂ ಸಮಾಜವನ್ನು ಒಗ್ಗೂಡಿಸುವಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಮುಂಬರುವ ದಿನಗಳಲ್ಲೂ ನೂತನ ಆಡಳಿತ ಮಂಡಳಿಯ ಕಾರ್ಯ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ನೂತನ ಅಧ್ಯಕ್ಷ ಲಿಂಗರಾಜ ಜಗಜಂಪಿ ಮಾತನಾಡಿ, ನಿರ್ಗಮಿತ ಆಡಳಿತ ಮಂಡಳಿ ಹಾಕಿದ ಅಡಿಪಾಯದ ಮೇಲೆ ಹೊಸ ದೃಷ್ಟಿಕೋನ ಮತ್ತು ಬದ್ಧತೆಯಿಂದ ಲಿಂಗಾಯತ ಬಿಸಿನೆಸ್ ಫೋರಂ ಮುನ್ನಡೆಸುವುದಾಗಿ ಹೇಳಿದರು.
ಲಿಂಗಾಯತ ಬಿಸಿನೆಸ್ ಫೋರಂ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಕಾರಂಜಿಮಠದ ಗುರುಸಿದ್ದ ಶ್ರೀಗಳನ್ನು ಸನ್ಮಾನಿಸಲಾಯಿತು.
ನೂತನ ಉಪಾಧ್ಯಕ್ಷರಾಗಿ ರಾಜಶೇಖರ ಶೀಲವಂತ, ಕಾರ್ಯದರ್ಶಿಯಾಗಿ ಸಚಿನ್ ಬೈಲವಾಡ, ಖಜಾಂಚಿಯಾಗಿ ಜ್ಯೋತಿ ನಿಂಬಾಳ, ಜಂಟಿ ಕಾರ್ಯದರ್ಶಿಯಾಗಿ ಸಂತೋಷ ಪಾವಟೆ, ಸದಸ್ಯತ್ವ ಪ್ರತಿನಿಧಿಯಾಗಿ ಮಹಾಂತೇಶ ಪುರಾಣಿಕ ಅಧಿಕಾರ ಸ್ವೀಕರಿಸಿದರು. ಈರಣ್ಣ ದೇಯಣ್ಣವರ, ವಿಜಯ ಪಾಟೀಲ ಉಪಸ್ಥಿತರಿದ್ದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸುಜಾತಾ ಹುಂಚೇನಟ್ಟಿ ಸ್ವಾಗತಿಸಿದರು. ಮಡಿವಾಳಪ್ಪ ತಿಗಡಿ ವಂದಿಸಿದರು
ಸಮುದಾಯದ ಅಸಹಾಯಕರನ್ನು ಮೇಲೆತ್ತಿ: ಹುಂಬರವಾಡಿ
