ಬೆಳಗಾವಿ :ವಾಹನ ತಗುಲಿದ ಕ್ಷುಲ್ಲಕ ಕಾರಣಕ್ಕೆ ಗೋವಾದ ಶಾಸಕರೊಬ್ಬರಿಗೆ ಹಲ್ಲೆ ನಡೆಸಿದ್ದು, ಅವರು ಮೃತಪಟ್ಟ ಘಟನೆ ನಗರದ ಖಡೆ ಬಜಾರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದು, ಶ್ರೀನಿವಾಸ ವಸತಿ ಗೃಹ (ಲಾಡ್ಜ್) ಹತ್ತಿರ ಘಟನೆ ನಡೆದಿದೆ. ಗೋವಾದ ಮಾಜಿ ಶಾಸಕ ಲಾವು ಮಾಮಲೇದಾರ (69) ಅವರು ಹಲ್ಲೆಯಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ರಿಕ್ಷಾಗೆ ಕಾರು ತಗುಲಿದ ಪರಿಣಾಮ ಅಟೋ ಚಾಲಕ ಅಹ್ಮದ ಶಕೀಲ ಹಾಗೂ ಮಾವೋ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅಹ್ಮದ ಮಾಜಿ ಶಾಸಕರ ಮೇಲೆ ಅಠಾತ್ತ ದಾಳಿ ಮಾಡಿ ಹಲ್ಲೆ ನಡೆಸಿದಾಗ ಅವರು ಮೃತಪಟ್ಟಿದ್ದಾರೆ.
ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದರು. ಮೃತದೇಹವನ್ನು ಬಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ತಕ್ಷಣವೇ ಆರೋಪಿ ಅಹ್ಮದ ಶಕೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಗೋವಾ ಮಾಜಿ ಶಾಸಕ ಲಾವೂ ಮಾಮಲೇದಾರ್ ಅವರು ಶ್ರೀನಿವಾಸ್ ಲಾಡ್ಡ್ ನಲ್ಲಿದ್ದರು. ತಮ್ಮ ಕಾರಿನಲ್ಲಿ ಲಾಡ್ಡ್ ಕಡೆ ಬರುವಾಗ ಆಟೋಗೆ ಕಾರು ಟಚ್ ಆಗಿದೆ ಎಂಬ ವಿಚಾರ ಆಟೋ ಚಾಲಕ ಮತ್ತು ಅವರ ನಡುವೆ ಸಣ್ಣ ಜಗಳ ಆಗುತ್ತದೆ. ಬಳಿಕ ಆಟೋ ಚಾಲಕ ಅವರ ಕಪಾಳಿಗೆ ಹೊಡೆಯುತ್ತಾನೆ. ನಂತರ ಮೆಟ್ಟಿಲು ಹತ್ತಿಕೊಂಡು ತಾವು ಉಳಿದುಕೊಂಡಿದ್ದ ರೂಮಿಗೆ ಹೋಗುವಾಗ ಕುಸಿದು ಬೀಳುತ್ತಾರೆ. ಕೂಡಲೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಇಸಿಜಿ ಸೇರಿ ಮತ್ತಿತರ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಮುಂದುವರಿಸಿದ್ದೇವೆ ಎಂದರು.