ಬೆಳಗಾವಿ: ರಾಜ್ಯದಲ್ಲಿ ಭಜರಂಗದಳ ನಿಷೇಧ ಮಾಡುವ ಅಥವಾ ಮಾಡಲು ತರಾತುರಿ ಏನಿಲ್ಲ, ಆರ್ ಎಸ್ ಎಸ್ ಉದಾಹರಣೆಯನ್ನಷ್ಟೇ ಕೊಟ್ಟಿದ್ದೇವೆ. ಕಾನೂನಿನ ಚೌಕಟ್ಟಿನೊಳಗೆ ಇರುವ ಯಾವುದೇ ಸಂಘಟನೆಯನ್ನು ನಿಷೇಧಿಸುವುದಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದರು.
ಸಚಿವರಾದ ನಂತರ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸಿದ ಅವರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಹಲವು ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಈ ಬಾರಿ ಗೆದ್ದವರು ಕನಿಷ್ಠ ಎರಡು ಅಥವಾ ಮೂರು ಬಾರಿ ಗೆದ್ದವರೇ ಇದ್ದಾರೆ. ಬೆಳಗಾವಿ ಜಿಲ್ಲೆ ಮತ್ತು ಬೇರೆ ಕಡೆಯೂ ಕೆಲವರಿಗೆ ಸಚಿವ ಸ್ಥಾನ ಕೊಡಲು ಆಗಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನ ಎಲ್ಲ ಕಡೆ ಇದೆ. ಯಾರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅವರೆಲ್ಲಾ ಆರೋಪ ಮಾಡುತ್ತಿದ್ದಾರೆ. ಅದು ಸ್ವಾಭಾವಿಕ ಮತ್ತು ಸಹಜ. ಅಂತವರಿಗೆ ಬೇರೆ ಹುದ್ದೆ ಕೊಡುತ್ತೇವೆ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ಸ್ಥಾನ ಬದಲಾವಣೆ ವಿಚಾರಕ್ಕೆ ಯಾರೇ ಇದ್ದರೂ ಕಾಂಗ್ರೆಸ್ ನವರೇ ಮುಖ್ಯಮಂತ್ರಿ ಇರುತ್ತಾರೆ. ಅದು ಯಾವ ರೀತಿ ಮಾತುಕತೆ ಆಗಿದೆ ಗೊತ್ತಿಲ್ಲ ಎಂದ ಸತೀಶ ಜಾರಕಿಹೊಳಿ, ಖಾತೆ ಹಂಚಿಕೆ ಈಗಾಗಲೇ ಫೈನಲ್ ಆಗಿದೆ, ಬಿಡುಗಡೆ ಆಗಿರುವ ಪಟ್ಟಿಯೇ ಅಂತಿಮ. ರಾಜ್ಯಪಾಲರಿಂದ ಅಂತಿಮ ಮುದ್ರೆ ಸಿಗಬೇಕಿದೆ ಅಷ್ಟೇ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತಡೆ ಹಿಡಿದ ವಿಚಾರಕ್ಕೆ ಅದು ಸ್ವಾಭಾವಿಕ ಮತ್ತು ಸಹಜ. ಒಂದು ಹೊಸ ಸರ್ಕಾರ ಬಂದ ಮೇಲೆ ಅದು ವಾಡಿಕೆ ಇದೆ. ಸಂಬಂಧ ಪಟ್ಟ ಮಂತ್ರಿಗಳು ಬಂದ ಮೇಲೆ ಅದನ್ನು ನೋಡುತ್ತಾರೆ. ಅಧಿಕಾರ ತೆಗೆದುಕೊಂಡ ಮೇಲೆ ಕಾಮಗಾರಿಗಳನ್ನು ನೋಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಯೋಜನೆಗಳನ್ನು ಮುಂದುವರಿಸುತ್ತಿರಾ ಎಂಬ ಪ್ರಶ್ನೆಗೆ, ಅವಶ್ಯಕವಾಗಿದ್ದರೆ, ಜನಪರವಾಗಿದ್ದರೆ ಮುಂದುವರಿಸುತ್ತೇವೆ. ಅನವಶ್ಯಕ ಯೋಜನೆಗಳು ಇದ್ರೆ ಅವುಗಳನ್ನು ಬಂದ್ ಮಾಡುತ್ತೇವೆ ಎಂದ ಸತೀಶ ಜಾರಕಿಹೊಳಿ, ಇದಕ್ಕೆ ಧ್ವನಿಗೂಡಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಬ್ಯಾನ್ ಮಾಡುತ್ತೇವೆ ಎಂದು ನಾವು ಎಲ್ಲಿಯು ಹೇಳಿಲ್ಲ ಎಂದುಉ ಸಮರ್ಥಿಸಿಕೊಂಡರು.
ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ, ಮೌಢ್ಯ ನಿಷೇಧ ಕಾಯ್ದೆ ನಾವು ಬರುವ ಮುಂಚೆಯೇ ಇದೆ. ಈಗ ಮತ್ತೆ ಅದನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ ಎಂದ ಅವರು, ಸರ್ಕಾರ ಟೇಕಫ್ ಆಗಿಲ್ಲ ಎಂದು ವಿಪಕ್ಷಗಳು ಹೇಳುತ್ತವೆ. ಹೀಗಾಗಿ ಒಂದೇ ಸಾರಿ ಟೇಕಫ್ ಆಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ನಮಗೆ ಅವಕಾಶ ಕೊಡಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.
ಇದೇ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಯಮಕನಮರಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳಿಂದ ಆಗಮಿಸಿದ್ದ ನೂರಾರು ಬೆಂಬಲಿಗರು, ಸಚಿವದ್ವಯರ ಮೇಲೆ ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿ ಮತ್ತಿತರರು ಈ ವೇಳೆ ಇದ್ದರು.