ಬೆಳಗಾವಿ: ಮನೆಗೆ ನುಗ್ಗಿ ಮಹಿಳೆಯ ಮುಖಕ್ಕೆ ಕಾರದ ಪುಡಿ ಎರಚಿ ದರೋಡೆ ಮಾಡುವ ಮೂಲಕ ಬೆಳಗಾವಿಯಲ್ಲಿ ಹಾಡಹಗಲೇ ದರೋಡೆಕೋರ ಅಟ್ಟಹಾಸ ಮೆರೆದಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.‌ ಚನ್ನಮ್ಮ ನಗರದಲ್ಲಿ ವಾಸವಿದ್ದ ಎಲ್&ಟಿ ಕಂಪನಿ ಉದ್ಯೋಗಿ ಮುರುಗನ್ ಹಾಗೂ ಪತ್ನಿ ಮೆನೆಯಲ್ಲಿದ್ದರು. ಬಳಿಕ ಮುರುಗನ್ ಕೆಲಸಕ್ಕೆ ತೆರಳಿದ ವೇಳೆ ಮನೆಗೆ ನುಗ್ಗಿದ ದರೋಡೆಕೋರ ಮಹಿಳೆಯ ಕಣ್ಣಿಗೆ ಖಾರದಪುಡಿ ಎರಚಿ ಕತ್ತು ಹಿಸುಕಿ ಕೊರಳಲ್ಲಿದ್ದ ಮಾಂಗಲ್ಯ, ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.‌
ಇನ್ನು ಈ ಘಟನೆಯುವ ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಕ್ರೈಮ್ ಡಿಸಿಪಿ ನಿರಂಜನ್ ಅರಸ, ಖಡೇಬಜಾರ್ ಎಸಿಪಿ ಶೇಖ್ರಪ್ಪ, ಉದ್ಯಮಬಾಗ ಪೊಲೀಸ್ ಠಾಣೆಯ ಸಿಪಿಐ ಡಿ ಕೆ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.