ಬೆಳಗಾವಿ: ಪಕ್ಷದಲ್ಲಿ ಸ್ಥಾನಮಾನ ಸುಮ್ಮನೆ ಕೊಡುವುದಿಲ್ಲ. ಅವರವರ ಜನಪ್ರಿಯತೆ, ಸಾಮರ್ಥ್ಯದ ಆಧಾರದ ಮೇಲೆ ಕೊಡುತ್ತಾರೆ. ಸುಮ್ಮನೆ ಹೋಗೋವವರಿಗೆ ಕೊಡಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ನೈಜ ಸ್ಥಿತಿ ಹೇಳಲು ಹೋದಾಗ ಬೇರೆ ಇರುತ್ತದೆ. ಅದನ್ನು ಹೆಚ್ಚೆಚ್ಚು ಬಿಂಬಿಸಿದರೆ ನಮಗೂ ಕಷ್ಟ, ಪಕ್ಷಕ್ಕೂ ಕಷ್ಟ . ಅಧ್ಯಕ್ಷರನ್ನು ಬದಲಾವಣೆ ಮಾಡಲು ನ್ಯಾವಾರು ಹೈಕಮಾಂಡನಿಂದ ಅಂತಿಮವಾಗುವ ಈ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಾವೇನೂ ಹೇಳೋದರಿಂದ ಪಕ್ಷಕ್ಕೆ ಮುಜುಗರ ಆಗಬಾರದು ಅಂತ ಸ್ಪಷ್ಟನೆ ನೀಡಿದ್ದೇವೆ.ನನಗೆ ಮಾತಬಾಡಬಾರದು ಎಂದು ಯಾರು ಹೇಳಿಲ್ಲ ಎಂದರು.

ಪಕ್ಷದಲ್ಲಿ ಸ್ಥಾನಮಾನಗಳು ಅಂಗಡಿಯಲ್ಲಿ ಮಾರುವ ವಸ್ತು ಅಲ್ಲ . ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು. ನಾವು ಒಂದು ಹೇಳುತ್ತೇವೆ. ಮಾಧ್ಯಮದವರು ಅವರ ಬಳಿ ಹೋಗಿ ಏನೂ ಕೇಳುತ್ತಾರೆ. ಅವರು ಯಾವುದೇ ಒತ್ತಡದಲ್ಲಿ ಏನೋ ಹೇಳುತ್ತಾರೆ. ನಾವು ಯಾವ ಸಂದರ್ಭದಲ್ಲಿ ಹೇಳಿದ್ದೇವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಪಕ್ಷಕ್ಕೆ ಮುಜುಗುರ ಆಗಬಾರದು ಎಂಬ ಕಾರಣಕ್ಕೆ ಮಾತನಾಡುವುದಿಲ್ಲ. ಈ ವಿಷಯವನ್ನು ಎರಡು ದಿನ ಬಿಟ್ಟು ಕೇಳಿದರೆ ತಣ್ಣಗಿರುತ್ತದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶಕ್ಕೆ ಹೊಸದೇನು ಇಲ್ಲ. ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ಆಗಮಿಸುತ್ತಿದ್ದಾರೆ. ಇದ್ದು ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಭಾಗವಹಿಸುತ್ತಾರೆ. ಮಧ್ಯಾಹ್ನ 3 ಗಂಟೆಗೆ ನಡೆಯುವ ಜೈ ಭೀಮ, ಜೈ ಬಾಪು, ಜೈ ಸಂವಿಧಾನ ಕಾಂಗ್ರೆಸ್ ಸಮಾವೇಶನಕ್ಕೆ ಹೆಚ್ಚಿನ ಜನರನ್ನು ಸೇರಿಸಲಾಗುತ್ತಿದೆ. ಜ.16ರಂದು ಬೆಳಗಾವಿಗೆ ಆಗಮಿಸುತ್ತಿರುವ ರಣದೀಪ ಸಿಂಗ್ ಸುರ್ಜೆವಾಲ್ ಅವರು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರ ಸಭೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.