ರಾಜ್ಯದ ಮುಖ್ಯಮಂತ್ರಿಯಾಗುವ  ಎಲ್ಲ ಅರ್ಹತೆ ಸತೀಶ ಜಾರಕಿಹೋಳಿ ಅವರಿಗಿದೆ. ಅದಕ್ಕೆ ಕಾಲ ಕೂಡಿ ಬರಬೇಕು, ಮುಂದೊಂದು ದಿನ ರಾಜ್ಯದ ನಾಯಕ್ತವ ಅವರ ಕೈಯಲ್ಲಿದೆ. ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ನೂತನ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಂದಿಲ್ಲಿ ಹೇಳಿದರು.

ಸಚಿವರಾದ ನಂತರ ತಮ್ಮ ತವರು ಜಿಲ್ಲೆ ಬೆಳಗಾವಿಗೆ ಆಗಮಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತರು, ಸತೀಶ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸತೀಶ ಜಾರಕಿಹೊಳಿ ಡಿಸಿಎಂ ಅಷ್ಟೇ ಅಲ್ಲ. ಮುಖ್ಯಮಂತ್ರಿಯಾಗುವ ಕಾಲ ಕೂಡಿ ಬರಲಿದೆ ಎಂದು ಉತ್ತರಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ರಾಹುಲ್ ಗಾಂಧಿ ಅವರಿಂದ 10 ಸಾವಿರ ರೂ. ವೇತನ ಹೆಚ್ಚಳ ಹೇಳಿಕೆ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಯಿಸಿದ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲನೇಯದಾಗಿ ಅಧಿಕೃತವಾಗಿ ಖಾತೆ ಹಂಚಿಕೆ ಆಗಬೇಕು. ಇಲಾಖಾವಾರು ಅಧಿಕಾರ ತೆಗೆದುಕೊಂಡು ಮಿಟಿಂಗ್ ಮಾಡಬೇಕು. ನಾವೇನು ವಾಗ್ದಾನ ಮಾಡಿದ್ದೇವೆ, ಅವುಗಳನ್ನು ಸಂಪೂರ್ಣ ಮಾಡಲು ಪ್ರಯತ್ನಿಸುತ್ತೇವೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೊಟ್ಟೆ ಭ್ರಷ್ಟಾಚಾರ ವಿಚಾರಕ್ಕೆ ಪ್ರಮಾಣವಚನ ಸ್ವೀಕರಿಸಿ 24 ಗಂಟೆಯೂ ಆಗಿಲ್ಲ. ಆಫೀಸಿಯಲಿ ಖಾತೆ ಹಂಚಿಕೆಯೂ ಇನ್ನು ಆಗಿಲ್ಲ. ಖಂಡಿತವಾಗಿ ಜನ ಮೆಚ್ಚುವ ಹಾಗೆ, ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವ ಹಾಗೆ, ನನಗೆ ಕೊಟ್ಟಂತ ಇಲಾಖೆ ನಡೆಸುತ್ತೇನೆ. ಭ್ರಷ್ಟಾಚಾರ ಮುಕ್ತ ಅಧಿಕಾರ ನಾವು ನಡೆಸುತ್ತೇವೆ ಎಂದರು. ನೂತನ ಸಚಿವರಾಗಿ ಬೆಳಗಾವಿ ಬಂದಿದ್ದು ಪ್ಲ್ಯಾನ್ ಏನಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ, ಪ್ಲ್ಯಾನ್ ಏನೂ ಹೊಸದೇನಿಲ್ಲ, ಹಳೆಯದ್ದೇ ಇವೆ, ಈಗಾಗಲೇ ಮಂತ್ರಿಯಾಗಿ ಕೆಲಸ ಮಾಡಿದ್ದೀವಿ. ಮೇಡಮ್(ಹೆಬ್ಬಾಳ್ಕರ್) ಅವರು ಸಹ ಶಾಸಕರಾಗಿದ್ದರು. ಶಾಸಕರು ಮಂತ್ರಿ ಇಬ್ಬರದ್ದೂ ವಿಚಾರ ಒಂದೇ ಇರುತ್ತೆ. ಹಿಂದೆ ಬಹಳಷ್ಟು ಚರ್ಚೆ ಮಾಡಿದ ಕೆಲಸ ಅಪೂರ್ಣ ಆಗಿವೆ. ಅವುಗಳನ್ನು ಪೂರ್ಣ ಮಾಡಲು ಇಬ್ಬರು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.