ಬೆಳಗಾವಿ,: ನ್ಯೂಸ್ 18 ಕನ್ನಡ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ‘ನ್ಯೂಸ್ 18 ಹೆಲ್ತ್ ಅವಾರ್ಡ್ 2024’
ಡಾ.ರಾಮಣ್ಣವರ ಚಾರಿಟೇಬಲ್ ಟ್ರೂಸ್ಟ್ ಗೆ ಅತ್ಯುತ್ತಮ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ 2024 ಪ್ರಶಸ್ತಿಯನ್ನು ಕೆಎಲ್ಇ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರು ಹಾಗೂ
ಕಾರ್ಯದರ್ಶಿ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಡಾ. ಮಹಾಂತೇಶ ರಾಮಣ್ಣವರ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಸ್ವೀಕರಿಸಿದರು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡೂರಾವ ಅವರು ಗೌರವ ಪತ್ರ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ ಸಚಿವರು ಶರಣ ಪ್ರಕಾಶ್ ಪಾಟೀಲ,
ಮನೋವೈದ್ಯ ಸಿ. ಆರ್ ಚಂದ್ರಶೇಖರ ಉಪಸ್ಥಿತರಿದ್ದರು.
ಡಾ. ರಾಮಣ್ಣವರ ಚಾರಿಟೇಬಲ ಟ್ರಸ್ಟ್ ಜನಸಾಮಾನ್ಯರಲ್ಲಿ ಇರತಕ್ಕಂತಹ ಮೂಢನಂಬಿಕೆಯನ್ನು ತೆಗೆದು ನೇತ್ರ,ಚರ್ಮದಾನ ಹಾಗೂ ಅಂಗಾಂಗದಾನದ ಜಾಗೃತಿಗಾಗಿ ಸಾರ್ವಜನಿಕರಲ್ಲಿ ತಿಳಿಹೇಳಿ ದೇಹದಾನ ಹಾಗೂ ಅಂಗಾಂಗದಾನ ಮಾಡಲು ಜನರಿಗೆ ಸ್ಪೂರ್ತಿದಾಯಕ ಕಾರ್ಯಕ್ರಮಗಳನ್ನು ಕಳೆದ 15 ವರ್ಷಗಳಿಂದ ರಾಜ್ಯ ಹಾಗೂ ಹೊರ ರಾಜ್ಯ ಆದ್ಯಂತ ಹಮ್ಮಿಕೊಂಡು ಯಶಸ್ವಿ ಗೊಳಿಸಿದ್ದಾರೆ. ಇದನ್ನು ಮನಗೊಂಡು ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕಾಲೇಜಿನ ಪ್ರಾಂಶುಪಾಲರು ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಟ್ರಸ್ಟಿನ ಮುಖಾಂತರ ಜನಪರ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮಾಡಲು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಪ್ರೇರಕಶಕ್ತಿಯಾಗಿದ್ದಾರೆ ಎಂದು ಡಾ ಮಹಾಂತೇಶ್ ರಾಮಣ್ಣವರ ಅಭಿಮತ ವ್ಯಕ್ತಪಡಿಸಿದ್ದಾರೆ.
ಡಾ. ರಾಮಣ್ಣವರ ಟ್ರಸ್ಟಗೆ ಅತ್ಯುತ್ತಮ ಟ್ರಸ್ಟ್ ಪ್ರಶಸ್ತಿ
