ಬೆಳಗಾವಿ: ಹಲಗಾ-ಮಚ್ಚೆ ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟಂತೆ ರೈತರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ತಿಳಿಸಿದ್ದಾರೆ.
ರವಿವಾರ ಹಲಗಾ-ಮಚ್ಚೆ ಹೆದ್ದಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ, ನಿಮಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಫಲವತ್ತಾದ ಕೃಷಿ ಜಮೀನಿನಲ್ಲಿ ಹೆದ್ದಾರಿ ನಿರ್ಮಿಸಲಾಗುತ್ತಿದೆ ಎಂದು ರೈತರು ಈ ಸಲವೂ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಈ ಹೆದ್ದಾರಿ ನಿರ್ಮಾಣಕ್ಕೆ ತಮ್ಮ ತೀವ್ರ ವಿರೋಧ ಇದೆ ಎಂದು ರೈತರು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು. ಹೆದ್ದಾರಿ ನಿರ್ಮಾಣ ಅಧಿಕಾರಿಗಳು ಮೂಲ ವಿನ್ಯಾಸವನ್ನು ಮರೆಮಾಚಿ ರೈತರ ಜಮೀನಿನಲ್ಲಿ ಹೆದ್ದಾರಿ ನಿರ್ಮಿಸುತ್ತಿದ್ದಾರೆ. ಈ ಮೊದಲು ಹೇಗಿತ್ತೋ ಅದೇ ರೀತಿ ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರೈತರು ತಿಳಿಸಿದರು. ಅಧಿವೇಶನದ ಒಳಗೆ ರೈತರ ಸಮಸ್ಯೆ ಈಡೇರಿಸಬೇಕು. ನಮಗೆ ತೀವ್ರ ಅನ್ಯಾಯವಾಗಿದ್ದು ಫಲವತ್ತಾದ ಕೃಷಿ ಭೂಮಿಯಲ್ಲಿ ಹೆದ್ದಾರಿ ಮಾಡಲು ಬಿಡುವುದಿಲ್ಲ ಎಂದು ರೈತರು ಮತ್ತೆ ತಕರಾರು ಎತ್ತಿದರು.
ರೈತರ ಮನವೊಲಿಸಿದ ಜಿಲ್ಲಾಧಿಕಾರಿಗಳು, ಹೆದ್ದಾರಿ ಅಧಿಕಾರಿಗಳ ಜೊತೆ ಸಭೆ ನಡೆಸುವುದಾಗಿ ತಿಳಿಸಿದರು.
ನಮಗೆ ಜಿಲ್ಲಾಧಿಕಾರಿಯವರ ಮೇಲೆ ವಿಶ್ವಾಸ ಇದೆ ಎಂದು ರೈತ ಮುಖಂಡ ಪ್ರಕಾಶ ನಾಯಕ ಹೇಳಿದರು.
ಹಲಗಾ – ಮಚ್ಚೆ ಹೊರರಸ್ತೆ ನಿರ್ಮಿಸಲು ಅವಕಾಶ ನೀಡದ ರೈತರು: ಡಿಸಿ ಸಭೆ
