ಬೆಳಗಾವಿ,: ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗವು ದಿ. ಸುರೇಶ್ ಅಂಗಡಿ ಅವರ ಕನಸು. ಅದನ್ನು ಇದೇ ಅವಧಿಯಲ್ಲಿ ನನಸು ಮಾಡುವ ಪ್ರಯತ್ನ ಮಾಡ್ತೇವಿ ಎಂದು ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಂದಿಲ್ಲಿ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಸಂಕೀರ್ಣ ಮತ್ತು ಸಮಸ್ಯೆಯಾಗಿದೆ. ಅದರ ಕುರಿತು ಚರ್ಚಿಸಿ ಪರಿಹರಿಸ್ತೀವಿ. ಪ್ರಧಾನಿ ನರೇಂದ್ರ ಮೋದಿವರು ಸಹ ಇದೇ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ರೈಲು ಓಡಿಸಲು ನಿರ್ಧರಿಸಿದ್ದಾರೆ. ಅದರಂತೆ
ಬೆಳಗಾವಿ ಜಿಲ್ಲಾಧಿಕಾರಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತೇನೆ. ಲೋಕಾಪುರ- ಧಾರವಾಡ ರೈಲಿನ ಬಗ್ಗೆ ಅದರ ಬಗ್ಗೆ ಗಮನ ಹರಿಸುತ್ತೇನೆ ಎಂದ ಅವರು, ಮುಂದಿನ ತಿಂಗಳಿನಿಂದ ವಂದೇ ಭಾರತ್ ಸ್ಲೀಪರ ಟ್ರೇನ ಬೆಳಗಾವಿ- ಬೆಂಗಳೂರು ಮದ್ಯೆ ಸಂಚಾರ ಆರಂಭಿಸಲಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಯಾರಾದರೂ ಮುಟ್ಟೊಕೆ ಆಗುತ್ತದೆಯಾ ಯಾರಾದ್ರು ಸಿಎಂ ಮುಟ್ಟಿದರೆ ಪೊಲೀಸರು ಕೇಸ್ ಹಾಕುತ್ತಾರೆ. ಆ ಅರ್ಥದಲ್ಲಿ ಸಿಎಂ ಮಾತನಾಡಿರಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಅನುಭವಿ ರಾಜಕಾರಣಿ.ಅವರು ಏನ್ ಮಾತಾಡ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ. ಸಮಾನ್ಯ ಜನರ ಭಾವನೆಗೆ ತದ್ವಿರುದ್ಧವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸಮಂಜಸ.ರಾಜ್ಯ ಸರ್ಕಾರದ ಕಾರ್ಯ ವೈಖರಿ ಸರಿಯಿಲ್ಲ. ಈ ಮಟ್ಟದಲ್ಲಿ ಯಾವತ್ತಾದ್ರು ನಡೆದಿತ್ತಾ. ನಿಮ್ಮನ್ನು ಯಾರು ಮುಟ್ಟುವುದು ಬೇಡ. ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅವರು ಗಮನ ಹರಿಸಬೇಕು ಎಂದರು.
ಬೆಳಗಾವಿ -ಬೆಂಗಳೂರು ಮದ್ಯೆ ವಂದೇ ಭಾರತ ಸ್ಲೀಪರ ಟ್ರೇನ
