ಬೆಳಗಾವಿ: ಹಳೆ ವೈಷಮ್ಯದ ಕಾರಣಕ್ಕೆ ಯುವಕನನ್ನು ಕುಡಗೋಲು ಹಾಗೂ ಬಿಯರ ಬಾಟಲನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೈಲಹೊಂಗಲದಲ್ಲಿ ನಡೆದಿದೆ.
ರವಿ ತಿಮ್ಮಣ್ಣನವರ(23) ಕೊಲೆಯಾದ ಯುವಕ. ಬೈಲಹೊಂಗಲದ ಶಾಲಾ ಮೈದಾನದಲ್ಲಿ ಹಳೆ ವೈಷಮ್ಯದಿಂದ 13 ಜನ ಗುಂಪು ಬಿಯರ್ ಬಾಟಲಿ ಮತ್ತು ಕುಡುಗೋಲಿನಿಂದ ಹೊಡೆದು ಯುವಕನನ್ನು ಕೊಲೆಗೈದಿದ್ದಾರೆ. ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.