ಬೆಳಗಾವಿ,: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದು, ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಆರತಿ ಚವ್ಹಾಣ್(32) ಮೃತಪಟ್ಟ ಗರ್ಭಿಣಿ‌ಯಾಗಿದ್ದಾರೆ. ಹೊಟ್ಟೆ ನೋವಿಗೆ ಚಿಕಿತ್ಸೆಗೆ ಗೊಂದಳಿ ಗಲ್ಲಿಯ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಳು. ಶಸ್ತ್ರಚಿಕಿತ್ಸೆಯನ್ನೂ ಕೂಡ ವೈದ್ಯರು ನೆರವೇರಿಸಿದ್ದರು. ಈ ವೇಳೆ ನಾಲ್ಕು ತಿಂಗಳ ಗರ್ಭಿಣಿ ಎಂದು ಹೇಳಿದ್ದರೆ, ಮತ್ತೊಂದು ಬಾರಿ ಆರು ತಿಂಗಳ ಕೂಸಿದೆ ಎಂದು ಹೇಳಿದರು. ನಂತರ ಹೊಟ್ಟೆ ನೋವು ತೀವ್ರಗೊಂಡ ಬಳಿಕ, ಸಂಜೆ ಬಿಪಿ ಲೋ ಇದೆ ನಮ್ಮಲ್ಲಿ ವ್ಯವಸ್ಥೆ ಇಲ್ಲ. ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಎಂದಾಗ, ಸಾಗಿಸುವ ಮಾರ್ಗಮದ್ಯದಲ್ಲಿಯೇ
ಮಹಿಳೆ ಮೃತಪಟ್ಟಿದ್ದಾಳೆ.
ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ರೋಗಿ ನರಳಿದ್ರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆರತಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಆಸ್ಪತ್ರೆ ವಿರುದ್ದ ದೂರು ದಾಖಲಿಸಿದ್ದಾರೆ.