ಬೆಳಗಾವಿ,: ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶವು ಸ್ವತಂತ್ರ ಗೊಂಡು ಈ 77 ವಸಂತಗಳಲ್ಲಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಹಾಗೂ ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ವಿಶ್ವದ ಮುಂಚೂಣಿ ರಾಷ್ಟçವಾಗಿ ಹೊರಹೊಮ್ಮಿದೆ. ಇಂತಹ ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ ದೇಶದ ಏಕತೆ-ಸಮಗ್ರತೆಯ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರö್ಯ ವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ನುಡಿದರು.
ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರö್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತವು ಭದ್ರ ಬುನಾದಿ ಹಾಕಿದೆ.
ಸ್ವಾತಂತ್ರö್ಯ ಹೋರಾಟಗಾರರಾದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತಿç, ಬಾಲಗಂಗಾಧರ ಟಿಳಕ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣದ ನಂತರ ಜರುಗಿದ ವಿವಿಧ ಕವಾಯತ ಪಡೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿದರು. ತದನಂತರ ಕವಾಯತ ಕಮಾಂಡರುಗಳಾದ ಎ.ಎಸ್.ವಾರದ ಹಾಗೂ ಇಮ್ತಿಯಾಜ ದಖನಿ ಅವರ ನೇತೃತ್ವದಲ್ಲಿ ಜರುಗಿದ ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸಿದ್ದ ಜಿಲ್ಲಾ ಪೋಲಿಸ ಸಶಸ್ತ್ರ ಪಡೆ, ಪುರುಷ ಹಾಗೂ ಮಹಿಳಾ ನಾಗರಿಕ ಪೋಲಿಸ ಪಡೆ, ಕೆ.ಎಸ್.ಆರ್.ಪಿ ತುಕುಡಿ, ಗೃಹ ರಕ್ಷಕ ದಳ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳ, ಎನ್.ಸಿ.ಸಿ ಸೀನಿಯರ್ಸ ಬಾಯ್ಸ್ ಹಾಗೂ ಗರ್ಲ್್ಸ, ಭಾರತ ಸೇವಾ ದಳದ ಮಹಿಳಾ ವಿದ್ಯಾಲಯ, ಅಗಸಗಾದ ಎಸ್.ಎಲ್.ವಿಕೆ ಪ್ರೌಢ ಶಾಲೆ, ಗಲ್ರö್ಸ ಗೈಡ್ ಮಹಿಳಾ ವಿದ್ಯಾಲಯ, ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ, ಜೈನ ಹೆರಿಟೆಜ್ ಶಾಲೆ, ಡಿ.ಪಿ ಶಾಲೆ, ಖಂಜದರ ಗಲ್ಲಿ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ, ಶರ್ಮನ ಕನ್ನಡ ಮಾಧ್ಯಮ ಶಾಲೆ, ಲಿಟಲ್ ಸ್ಕಾಲರ ಅಕಾಡೆಮಿ ಶಾಲೆ, ಬೆಳಗಾವಿ ಪಬ್ಲಿಕ ಶಾಲೆ ಹಾಗೂ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿಧ್ಯಾರ್ಥಿಗಳ ಆಕರ್ಷಕ ಪಥ ಸಂಚಲನವು ಸಭಿಕರ ಗಮನ ಸೆಳೆದವು
ಸನ್ಮಾನಿತರು: ಅಂಗಾAಗಾ ದಾನ ಮಾಡಿದ ಕುಟುಂಬ ಸದಸ್ಯರುಗಳಾದ ಅಬ್ದುಲ ರಜಾಕ್, ದುಂಡಪ್ಪ ಬಿ.ಪಿ, ದೀಪಾ ಸರ್ವಿ, ಹಾಗೂ ಅಲ್ಪಸಂಖ್ಯಾತರ ಸಮುದಾಯದ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಾದ ತೀರ್ಥಾ.ಎಸ್, ಜೋಷು ಆನಂದ ರೋಟಿ, ಶಾಫ್ ಅಹಮದ ಕಿತ್ತೂರ,ಮೊಹಮ್ಮದ ತಹಾ ಖಾನ, ಆಸ್ತಾ ದೀಪಕ ಪಾಟೀಲ,ಸಾಹೀಬಾ ಖಾಜಿಮಿಯಾ ಸನದಿ, ತನಿಷ್ಕ ಜಮಾಲ ವಡ್ರಾಳಿ, ಸಮ್ಮೇದ ಪಾರೀಸ್ ಭೋಜ, ಸಮ್ಮೇದ ಸಂಜು ಸುಪ್ಪಣ್ಣವರ,ಮೆಹಬೂಬಿ ಬಸೀರ ನಾಲಬಂದ ಇವರುಗಳನ್ನು ಸಚಿವರು ಹಾಗೂ ಗಣ್ಯರುಗಳು ಸನ್ಮಾನಿಸಿದರು.
ಸಸಿ ವಿತರಣೆ: ಜಿಲ್ಲೆಯಲ್ಲಿ ತಾಳೆ ಬೆಳೆ ಬೆಳೆಯಲು ಉತ್ತೇಜಿಸುವ ನಿಟ್ಟಿನಲ್ಲಿ ರೈತರುಗಳಾದ ಪಿರಾಜಿ ಮಾವುತ, ರವಿರಾಜ ಹವಾಲದಾರ, ರಘುನಾಥ ದಳವಿ, ಭುಜಂಗ ಖಡವಾಡಕರ, ಶ್ರೀಮತಿ ಗೀರಿಜಾ ಪಾಟೀಲ ಅವರುಗಳಿಗೆ ಉಚಿತ ತಾಳೆ ಸಸಿಗಳನ್ನು ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ಸಂಸದ ಜಗದೀಶ್ ಶೆಟ್ಟರ್, ಶಾಸಕ ಆಸೀಫ್ (ರಾಜು) ಸೇಠ, ಪಾಲಿಕೆ ಮಹಾಪೌರ ಸವಿತಾ ಕಾಂಬಳೆ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿ. ಪಂ. ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಡಿಸಿಪಿ ರೋಹನ್ ಜಗದೀಶ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.