ಬೆಳಗಾವಿ : ದೂದಸಾಗರ ಬಳಿ ಬೃಗಂಜಾ ಘಾಟನ ದೂಧಸಾಗರ ಮತ್ತು ಸೋನೊಲಿಮ್ ನಡುವೆ  ಗೂಡ್ಸ್ ರೈಲು ಹಳಿ ತಪ್ಪಿದೆ.  17 ವ್ಯಾಗನಗಳಲ್ಲಿ ಕಲ್ಲಿದ್ದಲು ತುಂಬಿಕೊಂಡು   ವಾಸ್ಕೋದಿಂದ ಹೊಸಪೇಟೆಯ ಜಿಂದಾಲ್ ಕಂಪನಿಗೆ ತೆರಳತ್ತಿತ್ತು. 
ಇದರಿಂದಾಗಿ ಕೆಲ ರೈಲಗಳನ್ನು ರದ್ದು ಅಥವಾ ಪರ್ಯಾಯ ಮಾರ್ಗಗಳ ಮೂಲಕ ಓಡಿಸಲಾಗುತ್ತಿದೆ.
*ಪರ್ಯಾಯ ಮಾರ್ಗದ ಮೂಲಕ ಸಂಚರಿಸುವ ರೈಲುಗಳು:*

1. ರೈಲು ಸಂಖ್ಯೆ 17420/17022 ವಾಸ್ಕೋಡಗಾಮಾ – ತಿರುಪತಿ/ಹೈದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ದಿ. 09.08.2024 ರಂದು ಸಂಚರಿಸುವ  ರೈಲು ಮಡಗಾಂವ್, ಕಾರವಾರ, ಪಡೀಲ್, ಸುಬ್ರಹ್ಮಣ್ಯ ರಾವ್, ಹಾಸನ, ಅರಸೀಕೆರೆ, ಚಿಕ್ಕಜಾಜೂರು ಮತ್ತು ರಾಯದುರ್ಗ ಮೂಲಕ ಸಂಚರಿಸುತ್ತಿದೆ.

2. ರೈಲು ಸಂಖ್ಯೆ. 12779 ವಾಸ್ಕೋ ಡ ಗಾಮಾ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್, 09.08.2024 ರಂದು  ಮಡಗಾಂವ್, ರೋಹಾ, ಪನ್ವೆಲ್, ಕಲ್ಯಾಣ್ ಮತ್ತು ಪುಣೆ ಮೂಲಕ ಸಂಚರಿಸಲಿದೆ.

3. ರೈಲು ಸಂಖ್ಯೆ. 12780 ಹಜರತ್ ನಿಜಾಮುದ್ದೀನ್ – ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್, 08.08.2024 ರಂದು ಪುಣೆ, ಕಲ್ಯಾಣ್, ಪನ್ವೇಲ್, ರೋಹಾ ಮತ್ತು ಮಡಗಾಂವ್ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಲಿದೆ.

1. ರೈಲು ಸಂಖ್ಯೆ. 17309 ಯಶವಂತಪುರ – ವಾಸ್ಕೋ ಡ ಗಾಮಾ ಹಾಗೂ ವಾಸ್ಕೊ ಡ ಗಾಮಾ – ಯಶವಂತಪೂರ ರೈಲನ್ನು  09.08.2024 ರಂದು  ರದ್ದುಗೊಳಿಸಲಾಗಿದೆ.


140 ಟನ್ ಕ್ರೇನ್‌ಗಳು ಮತ್ತು ಇತರ ಅಗತ್ಯ ಸಾಮಗ್ರಿಗಳೊಂದಿಗೆ ವಾಸ್ಕೋಡಗಾಮಾ ಮತ್ತು ಹುಬ್ಬಳ್ಳಿಯ ಅಪಘಾತ ಪರಿಹಾರ ರೈಲಿನೊಂದಿಗೆ ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ಮ್ಯಾನೇಜರ್ ಹರ್ಷ ಖರೆ ಮತ್ತು ಇತರ ಹಿರಿಯ ಅಧಿಕಾರಿಗಳು ಹಳಿತಪ್ಪಿದ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು  ಧಾವಿಸಿದ್ದಾರೆ. 
ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ, ಕೆ ಎಸ್ ಜೈನ್ , ವಿಭಾಗದ ಪ್ರಧಾನ ಮುಖ್ಯಸ್ಥರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.