ಬೆಳಗಾವಿ,: ಮೂಡ ನಂಬಿಕೆಗೆ ಮಾರುಹೋಗಿ ತನ್ನ ಮನೆಯ ಮುಂದೆ ಅಪರಿಚಿತರು ಮಾಟಮಂತ್ರ ಮಾಡಿಸಿದ್ದಾರೆ ಎಂದು ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ಆರೋಪಿಗೆ ಬೆಳಗಾವಿ 6ನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಕಂಗ್ರಾಳಿಯ ರಾಮನಗರದ ಅನಿಲ್ ಚಂದ್ರಕಾಂತ ಬಾಂದೇಕರ್ ಶಿಕ್ಷೆಗೆ ಒಳಗಾದ ಆರೋಪಿ. ಕಳೆದ ಜು.2021ರಲ್ಲಿ ತನ್ನ ಮನೆಯ ಮುಂದೆ ಯಾರೋ ಅಪರಿಚಿತರು ಮಾಡಿಸಿದ್ದಾರೆ ಎಂದು ಮನನೊಂದು ತನ್ನ ಹೆತ್ತ ಮಕ್ಕಳಾದ ಅಂಜಲಿ (8) ಹಾಗೂ ಅನನ್ಯ (4) ವಿಷ ಕುಡಿಸಿ ಹತ್ಯೆ ಮಾಡಿದ್ದ ಆರೋಪಿಯ ಹೆಂಡತಿ ನೀಡಿದ ದೂರಿನ ಮೇಲೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಅಂದಿನ ಸಿಪಿಐ ಮಂಜುನಾಥ ಹಿರೇಮಠ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ಸಾಕ್ಷ್ಯ ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸಿದರು‌

ಜುಲೈ 2021 ರಲ್ಲಿ ಎಪಿಎಂಸಿ ಪೊಲೀಸ್ ಠಾಣೆ ಹದ್ದಿಯ ರಾಮನಗರ 2ನೇ ಕ್ರಾಸ್, ಕಂಗ್ರಾಳಿ ಕೆಎಚ್ ಗ್ರಾಮದ ತಮ್ಮ ಮನೆಯ ಮುಂದೆ ಯಾರು ಮಾಟಮಂತ್ರ ಮಾಡಿಸಿ ಇಟ್ಟಿರುವ ಬಗ್ಗೆ ಮನನೊಂದ ಆರೋಪಿ ಅನಿಲ್ ಚಂದ್ರಕಾಂತ ಬಾಂದೇಕರ್ ಸಾಕಿನ್ ಜಿಲ್ಲೆ ಬೆಳಗಾವಿ ರಾಮನಗರ ಕೆಎಚ್ ಕಂಗ್ರಾಳಿ ಬೆಳಗಾವಿ ಇವನು ಅಂಜಲಿ(8) ಮತ್ತು ಅನನ್ಯ(4) ಎಂಬ ತನ್ನ ಎರಡೂ ಹೆಣ್ಣು ಮಕ್ಕಳಿಗೆ ಯಾವುದೋ ವಿಷ ಕುಡಿಸಿ ಕೊಲೆಗೈದ ಬಗ್ಗೆ ಆತನ ವಿರುದ್ಧ ಅವನ ಹೆಂಡತಿ ಶ್ರೀಮತಿ ಜಯಾ ಬಾಂಧೇಕರ್ ನೀಡಿದ ದೂರನ್ನು ಆಧರಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಆಗಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಮಂಜುನಾಥ ಹಿರೇಮಠ ರವರು ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಅಂದಿನ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ಹಿರೇಮಠ ಹಾಗೂ ತನಿಕಾ ಸಹಾಯಕ ವೀರಭದ್ರ ಬೂದನವರ ರವರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ ಡಿಸಿಪಿ ಸ್ನೇಹಾ ಪಿ.ವಿ. ಶ್ಲಾಘನೆ ವ್ಯಕ್ತಪಡಿಸಿದ್ದಾರೆ.