ಬೆಳಗಾವಿ,: ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಸುಮಾರು 40-45 ವರ್ಷದ ವ್ಯಕ್ತಿಯ ಮೃತದೇಹವು ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಸಂಚಾರ ಪೊಲೀಸರು ವಶಪಡಿಸಿಕೊಂಡು ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಬಸ್‌ನ ಹಿಂಬದಿ ಸೀಟಿನಲ್ಲಿ ಶವ ಪತ್ತೆಯಾಗಿದೆ. ಸುಮಾರು ಹತ್ತು ದಿನಗಳ ಹಿಂದೆ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕಾಗಿ ಸಾವು ಸಂಭವಿಸಿದೆ ಎಂದು ನಿಖರವಾಗಿ ತಿಳಿಯಲು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಮೃತ, ಅಪರಿಚಿತ ವ್ಯಕ್ತಿಯ ಭಿಕ್ಷಾಟನೆ ಮಾಡುತ್ತಿದ್ದನು ಎಂದು ಮೂಲಗಳು ತಿಳಿಸಿವೆ. ಕೊಳೆತ ಸ್ಥಿತಿಯ ಪರಿಣಾಮ ಹೊರಹೊಮ್ಮುವ ದುರ್ವಾಸನೆಯಿಂದಾಗಿ ಸಿಂ ಸಿಬ್ಬಂದಿಯು ಪರಿಶೀಲಿಸಿದಾಗ ಮೃತ ದೇಹವು ಪತ್ತೆಯಾಗಿದೆ. ಗುರುತಿಸಲಾರದಷ್ಟು ಕೊಳೆತುಹೋಗಿದೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾರಂಭಿಸಿದ್ದಾರೆ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಪಾಸಣೆ ನಡೆಸಿದರು,