ಬೆಳಗಾವಿ, ಆ.31 ಬಸವಣ್ಣವರ ವಿಚಾರಗಳಿಗೆ ಮನಸೋತ ನುಲಿ ಚಂದಯ್ಯನವರು ದೇಶದ ರಾಜನಾಗಿದ್ದರೂ ಕೂಡಾ ಕಾಯಕದಲ್ಲಿ ತೋಡಗಿಕೊಂಡು ಯಾವುದೇ ಜಾತಿ, ಧರ್ಮ, ಲಿಂಗ, ಬಡವ, ಶ್ರೀಮಂತ, ಎಂಬ ಬೇದ ಭಾವ ವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸಿದವರು ನುಲಿ ಚಂದಯ್ಯ ನವರು ಎಂದು ಸಾಹಿತಿ ರಂಜಾನ್ ದರ್ಗಾ ಅವರು ಹೇಳಿದರು.

ಜಿಲ್ಲಾಡಳತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ನುಲಿ ಚಂದಯ್ಯ ನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ದಾಸೋಹ, ಕಾಯಕ, ಅಂತಃಕರಣ ಅನುಸರಿಸಿದ ನುಲಿ ಚಂದಯ್ಯನವರು ದಾಸೋಹ, ಕಾಯಕ ಎಂದರೆ ಸಮಾಜದ ಕಾಳಜಿಯನ್ನು ಹೊಂದುವುದು, ಸಮಾಜದ ಜನರ ಏಳಿಗೆಯ ಜೊತೆಗೆ ತಮ್ಮಸುತ್ತಲಿನ ಪರಿಸರ ರಕ್ಷಣೆ, ಪ್ರಾಣಿ ರಕ್ಷಣೆ ಸೇರಿದಂತೆ ಎಲ್ಲ ಸಕಲ ಜೀವಿಗಳಿಗಾಗಿ ಶ್ರಮಿಸುವುದೆ ಕಾಯಕ ಎಂದು ಸಮಾಜಕ್ಕೆ ಅರ್ಥೈಸಿದವರು ನುಲಿ ಚಂದಯ್ಯ ನವರು ಎಂದರು.

ಹಡಗಿನಾಳ ಮಠದ ಮುತ್ತೇಶ್ವರ ಸ್ವಾಮಿಜಿಗಳು ಮಾತನಾಡಿ, ಕಾಯಕ ಯೋಗಿ ನುಲಿ ಚಂದಯ್ಯನವರು ಯಾವುದೇ ಬೇದ ಭಾವ ಮಾಡದೆ ಎಲ್ಲರನ್ನೂ ಸಮಾನತೆಯಿಂದ ಕಂಡವರು ನುಲಿ ಚಂದಯ್ಯ ನವರು ಅಂತಹ ಯೋಗಿಗಳ ವಿಚಾರ ಚಿಂತನೆ, ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ ಎಂದು ಹೇಳಿದರು.

ಅರಳಿಕಟ್ಟಿ ವೀರಪ್ಪ ಮಠದ ಶಿವಮೂರ್ತಿ ಸ್ವಾಮಿಜಿಗಳು ಮತನಾಡಿದರು.

ಅಪರ ಜಿಲ್ಲಾಧಿಕಾರಿಯಾದ ವಿಜಕುಮಾರ ಎಮ್. ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ, ಜಾಗತಿಕ ಲಿಂಗಾಯಿತ ಮಹಾಸಭೆ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ, ಬೆಳಗಾವಿ ಕೊರುವ ಸಮಾಜದ ಜಿಲ್ಲಾ ಅಧ್ಯಕ್ಷರಾದ  ರಾಮಜಿ  ಭಜಂತ್ರಿ, ಶಹನಾಯಿ ವಾದಕ ಪಂಡಿತ ಬಾಲೇಶ (ಪದ್ಮಶ್ರೀ ಪ್ರಶಸ್ತಿ ಪುರಸ್ಕಾರತ) ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೆರವಣಿಗೆ ಕಾರ್ಯಕ್ರಮ:

ಇದಕ್ಕೂ ಮುನ್ನ ಶ್ರೀ ನುಲಿ ಚಂದಯ್ಯನವರ ಜಯಂತಿ ನಿಮಿತ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿಯಾದ ವಿಜಕುಮಾರ ಎಮ್. ಹೊನಕೇರಿ  ಅವರು ಕಿಲ್ಲಾ ಕೋಟೆ, ಅಶೋಕ ವೃತ್ತದಲ್ಲಿ ಚಾಲನೆ ನೀಡಿದರು.