ಬೆಳಗಾವಿ :ಮಾನಸಿಕವಾಗಿ ನೊಂದ ಯುವತಿಯೋರ್ವಳು ಹಳ್ಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ರುಕ್ಸನಾ ಅಲ್ಲಾ ಭಕ್ಷ ನದಾಫ (20) ಮೃತ ಯುವತಿ ಎಂದು ಗುರುತಿಸಲಾಗಿದೆ. ಬೈಲಹೊಂಗಲದ ನೇಗಿನಹಾಳ ಗ್ರಾಮದ ಸೇತುವೆ ಹತ್ತಿರದ ಹಳ್ಳದಲ್ಲಿ ಬಿದ್ದ ಯುವತಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. ಮುಂಬರುವ ನವೆಂಬರ ತಿಂಗಳಲ್ಲಿ ಮದುವೆಯನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು.
ಸ್ಥಳ ಕ್ಕೆ ಆಗಮಿಸಿದ ಸಿಪಿಐ ಪ್ರಮೋದ ಯಲಿಗಾರ, ಪಿ ಎಸ್ ಐ ಗುರುರಾಜ ಕಲಬುರ್ಗಿ, ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಅವರ ಸಹಾಯ ದಿಂದ ನೀರಿನಿಂದ ಯುವತಿಯ ಶವ ಹೊರ ತೆಗೆದರು. ಇಡೀ ಗ್ರಾಮವೇ ಸೇತುವೆ ಹತ್ತಿರ ನೆರೆದಿತ್ತು. ಕುಟುಂಬಸ್ಥ ರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಯ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.