ಬೆಳಗಾವಿ,:ಜೋಶಿಮಾಳದಲ್ಲಿ ವಿಷ ಸೇವಿಸಿ ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು‌ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದರು. ಸಂತೋಷ ಕುರಡೇಕರ್, ಸುವರ್ಣ ಕುರಡೇಕರ್ , ಮಂಗಳಾ ಕುರಡೇಕರ್ ವಿಷ ಸೇವಿಸಿ ಆತ್ಮಹತ್ಯೆ ‌ಮಾಡಿಕೊಂಡ ವೇಳೆ ಡೆತ್ ನೋಟ್ ಸಿಕ್ಕ ಹಿನ್ನೆಲೆಯಲ್ಲಿ ರಾಜೇಶ ಕುಡತರಕರ,ಭಾಸ್ಕತ್ ಸೋನಾರ್ಕರ್ ಹಾಗೂ ನಾನಾಸೋ‌ ಶಿಂಧೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ವಿಷ ಸೇವಿಸಿದ್ದ ಸುನಂದ ಕುರಡೇಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಿಂದ‌ ಹೆಚ್ಚಿನ ಮಾಹಿತಿ ಪಡೆದಿಲ್ಲ. ಅವರು ಸಹ ನಮ್ಮ ಸಹೋದರನ 500 ಗ್ರಾಂ ಚಿನ್ನ ರಾಜೇಶ ಮನೆಯಲ್ಲಿ ಇದೆ ಎಂದಿದ್ದರು. ನಾವು ಶಹಾಪುರ ಪೊಲೀಸ್ ಠಾಣೆಯ ಪೊಲೀಸರು ದಾಳಿ ಮಾಡಿದಾಗ 600 ಗ್ರಾಂ ಚಿನ್ನ ದೊರಕಿದೆ. ಅಲ್ಲದೆ, 4 ಲಕ್ಷ ನಗದು ಸಿಕ್ಕಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.
ಸಾರ್ವಜನಿಕರು ಸಾಲ ಪಡೆಯುವಾಗ ಅಧಿಕೃತ ನೊಂದಣಿ ಇರುವ ಸಂಘಗಳಿಂದ ಸಾಲ ಪಡೆಯಿರಿ. ವಿನಾಕಾರಣ ಬೇರೆಯವರ ಕಡೆಯಿಂದ ಸಾಲ ಪಡೆದರೆ ಅವರು ಕಿರುಕುಳ ಕೊಡುತ್ತಾರೆ ಎನ್ನುವ ದೂರುಗಳು ಬಂದಿವೆ ಎಂದರು.