ಬೆಳಗಾವಿ : ಬೆಳಗಾವಿ ಮಹಾಂತೇಶನಗರದ ಮೇಲ್ಸೇತುವೆ ಬಳಿ ಇಂದು ಇಬ್ರಾಹಿಂ ಗೌಸ್(22)ಎಂಬ ಯುವಕನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಸ್ಕ್ರೂ ಡ್ರೈವರ್ ನಿಂದ ಯುವಕನನ್ನು ಚುಚ್ಚಿ ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿ ಗಾಂಧಿನಗರದ ಯುವತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟಾಗ ಯುವತಿ ಸಹೋದರ ಗಮನಿಸಿ ಯುವಕನನ್ನು ಕೊಲೆ ಮಾಡಿದ್ದಾನೆ. ಮುಜಾಮಿಲ್ ಸತಿಗೇರಿ ಎಂಬುವನು ಈ ಕೃತ್ಯ ನಡೆಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.